ಮಡಿಕೇರಿ, ಮೇ ೬: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೆಮಾಡುವಿನಲ್ಲಿ ನಿರ್ಮಾಣಗೊಳ್ಳಲಿರುವ ವಿನೂತನ ಕ್ರಿಕೆಟ್ ಸ್ಟೇಡಿಯಂ ಸ್ಥಳಕ್ಕೆ ನಿನ್ನೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ), ಬಿ.ಸಿ.ಸಿ.ಐ.ನ ಪ್ರಮುಖರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸಂತೋಷ್ ಮೆನನ್, ಬಿಸಿಸಿಐಯ ಕ್ಯುರೇಟರ್ ಎಲ್. ಪ್ರಶಾಂತ್‌ರಾವ್, ಮೈಸೂರ್ ವಲಯ ಸಂಯೋಜಕರಾದ ಸುಧಾಕರ ರೈ ಅವರುಗಳು ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾ ಸಂಯೋಜಕರಾಗಿರುವ ಚೇನಂಡ ಪ್ರಥ್ವಿದೇವಯ್ಯ ಕಾಮಗಾರಿಯ ಉಸ್ತುವಾರಿ ವಹಿಸಿರುವ ಪೆಮ್ಮಯ್ಯ, ಪ್ರಕಾಶ್ ಅವರುಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.

ಕ್ರಿಕೆಟ್ ಸ್ಟೇಡಿಯಂ ಕಾಮಗಾರಿ ಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ ಅವರುಗಳು ಅಗತ್ಯ ಸಲಹೆ - ಸೂಚನೆಗಳನ್ನು ನೀಡಿದರು. ಪ್ರಸ್ತುತ ಈ ಜಾಗಕ್ಕೆ ಸಂಬAಧಿಸಿದAತೆ ಇರುವ ಕೊನೆಯ ಹಂತದ ಸಣ್ಣಪುಟ್ಟ ಗೊಂದಲ ನಿವಾರಣೆ ಬಳಿಕ ತಕ್ಷಣವೇ ಕೆಲಸ ಪ್ರಾರಂಭಿಸುವುದಾಗಿಯೂ ಅವರು ಈ ಸಂದರ್ಭ ಹೇಳಿದರು. ಜಿಲ್ಲೆಗೆ ಆಗಮಿಸುವ ಸಂದರ್ಭ ದಾರಿಯು ದ್ದಕ್ಕೂ ಬಹುತೇಕ ಮೈದಾನಗಳಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿ ದ್ದುದನ್ನು ವೀಕ್ಷಿಸಿದ ಪ್ರಮುಖರು ಈ ಅಂಶವನ್ನು ಉಲ್ಲೇಖಿಸಿದ, ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಸ್ಟೇಡಿಯಂ ಜಿಲ್ಲೆಯಲ್ಲಿ ಪೂರ್ಣ ಗೊಂಡರೆ ಇದು ಸಾಕಷ್ಟು ಸ್ಥಳೀಯ ಪ್ರತಿಭೆಗಳಿಗೆ ಅನುಕೂಲ ವಾಗಲಿದೆ. ಕೊಡಗು ಹಾಕಿಗೆ ನೀಡಿರುವ ಕೊಡುಗೆಯಂತೆ, ಕ್ರಿಕೆಟ್ ಆಟಗಾರರೂ ರೂಪುಗೊಳ್ಳಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.