ಮಡಿಕೇರಿ, ಮೇ ೬: ಜಿಲ್ಲೆಯಲ್ಲಿ ವಸತಿ ಸೌಕರ್ಯವಿಲ್ಲದೆ ತೋಟಗಳಲ್ಲಿ ಕಾರ್ಯನಿರ್ವಹಿಸುತ್ತ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ಮೊಗೇರ ಜನಾಂಗದವರಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ನಗರದಲ್ಲಿ ಕೊಡಗು ಜಿಲ್ಲಾ ಮೊಗೇರ ಸಮಾಜ ಹಾಗೂ ಮುದ್ದು ಕಲಲ ಯುವಕ ಸಂಘ ಪ್ರತಿಭಟನೆ ನಡೆಸಿತು.

ನಗರದ ಸುದರ್ಶನ ವೃತ್ತದಿಂದ ಮೆರವಣಿಗೆ ನಡೆಸಿದ ಪ್ರತಿಭಟನಾನಿರತರು ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತನಕ ಸಾಗಿದರು. ಈ ಸಂದರ್ಭ ಘೋಷಣೆಗಳನ್ನು ಕೂಗಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಮುದ್ದು ಕಲಲ ಯುವಕ ಸಂಘದ ಅಧ್ಯಕ್ಷ ಜ್ಯೋತಿಕುಮಾರ್ ಮಾತನಾಡಿ, ಲೈನ್‌ಮನೆಗಳಲ್ಲಿ ಮುದ್ದು ಕಲಲ ಯುವಕ ಸಂಘದ ಅಧ್ಯಕ್ಷ ಜ್ಯೋತಿಕುಮಾರ್ ಮಾತನಾಡಿ, ಲೈನ್‌ಮನೆಗಳಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ನಾವುಗಳು ಹಿಂದುಳಿದಿದ್ದೇವೆ.

(ಮೊದಲ ಪುಟದಿಂದ) ಸರಕಾರ ಹಾಗೂ ಜಿಲ್ಲಾಡಳಿತ ಸಮಾಜದ ಸಮಸ್ಯೆಗೆ ಪೂರಕ ಸ್ಪಂದನ ನೀಡಬೇಕು ಎಂದು ಆಗ್ರಹಿಸಿದರು. ತ್ವರಿತವಾಗಿ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸ ಲಾಗುವುದು ಎಂದು ಎಚ್ಚರಿಸಿದರು.

ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ ಮಾತನಾಡಿ, ಇಂದಿಗೂ ಲೈನ್‌ಮನೆಯಲ್ಲಿ ಹಲವರು ವಾಸಿಸುತ್ತಿದ್ದಾರೆ. ಪೈಸಾರಿ ಜಾಗವನ್ನು ಅಕ್ರಮ ಸಕ್ರಮವಾಗಿ ಪರಿವರ್ತಿಸಿ ಉಳ್ಳವರಿಗೆ ನೀಡುತ್ತಿದ್ದಾರೆ. ಮೊಗೇರ ಸಮಾಜ ಸೇರಿದಂತೆ ಅನೇಕ ಶೋಷಿತ ಸಮಾಜಕ್ಕೆ ಇನ್ನು ಕೂಡ ಸೂಕ್ತ ಸೌಲಭ್ಯ, ಸರಕಾರದ ಯೋಜನೆ ತಲುಪಿಲ್ಲ. ಹಲವು ಬಾರಿ ಈ ಬಗ್ಗೆ ಗಮನ ಸೆಳೆದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭ ಮೊಗೇರ ಸಮಾಜದ ಗೌರವ ಅಧ್ಯಕ್ಷ ಪಿ.ಎಂ. ರವಿ, ಉಪಾಧ್ಯಕ್ಷ ಬಿ. ಶಿವಪ್ಪ, ಪ್ರಧಾನ ಕಾರ್ಯದರ್ಶಿ ಜನಾರ್ಧನ್, ಖಜಾಂಜಿ ಚಂದ್ರ, ಮುದ್ದು ಕಲಲ ಯುವಕ ಸಂಘದ ಕಾರ್ಯದರ್ಶಿ ಗಿರೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.