ಕೂಡಿಗೆ, ಮೇ ೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಜೇನುಕಲ್ಲು ಬೆಟ್ಟ ಗ್ರಾಮದಲ್ಲಿರುವ ಉದ್ಭವ ಶ್ರೀ ಕಾಡು ಬಸವ ದೇವಾಲಯ ಸಮಿತಿಯ ವತಿಯಿಂದ ವಿಶೇಷ ಹೋಮ ಹವನ ಸೇರಿದಂತೆ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನಡೆದವು.
ಪೂಜ್ಯೋತ್ಸವ ಅಂಗವಾಗಿ ಗ್ರಾಮವು ತಳಿರು ತೋರಣಗಳಿಂದ ಸಿಂಗಾರಗೊAಡಿತ್ತು. ಉದ್ಭವ ಕಾಡು ಬಸವಣ್ಣ ದೇವರಿಗೆ ಬೆಳಿಗ್ಗೆನಿಂದಲೇ ವಿಶೇಷ ಅಭಿಷೇಕ ಸೇರಿದಂತೆ ವಿವಿಧ ಪೂಜೆಗಳು ನಡೆದು ೧೨ ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಂತರ ಅನ್ನದಾನ ಕಾರ್ಯಕ್ರಮ ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ಕೂಡಿಗೆ, ಸೀಗೆಹೊಸೂರು, ಮದಲಾಪುರ, ಭುವನಗಿರಿ, ಕಣಿವೆ, ಹುಲುಸೆ, ಗಂಗೆಕಲ್ಯಾಣ, ಬ್ಯಾಡಗೊಟ್ಟ ಗ್ರಾಮಗಳ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಸಿ. ನಂಜುAಡ ಸ್ವಾಮಿ, ಕಾರ್ಯದರ್ಶಿ ಬಸವರಾಜ್, ಗ್ರಾಮದ ಪ್ರಮುಖರಾದ ನಾಗೇಶ್, ರಾಜಣ್ಣ, ಧರ್ಮ, ವಿರೂಪಾಕ್ಷ, ದೇವರಾಜ್, ಅಪ್ಪಜೇಗೌಡ, ಮಹದೇವ, ಸೇರಿದಂತೆ ಇತರರು ಇದ್ದರು.