ಕೊಡ್ಲಿಪೇಟೆ, ಮೇ ೫: ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆ.ಎಸ್.ಆರ್.ಟಿ.ಸಿ. ಹಾಸನ ವಿಭಾಗದ ಅರಕಲಗೂಡು ಡಿಪೋದಿಂದ ಅರಕಲಗೂಡು-ಕೊಡ್ಲಿಪೇಟೆ ಮಾರ್ಗದಲ್ಲಿ ಹೊಸ ಬಸ್ ಸಂಚಾರ ಪ್ರಾರಂಭವಾಗಿದೆ. ಪ್ರತಿದಿನ ಬೆಳಿಗ್ಗೆ ೬.೩೦ಕ್ಕೆ ಅರಕಲಗೂಡು ಬಸ್ ನಿಲ್ದಾಣದಿಂದ ಹೊರಡುವ ಬಸ್ ಮಲ್ಲಿಪಟ್ಟಣ, ಬೆಸೂರು ಮಾರ್ಗವಾಗಿ ೭.೧೫ಕ್ಕೆ ಕೊಡ್ಲಿಪೇಟೆ ತಲುಪಲಿದೆ. ೭.೩೦ಕ್ಕೆ ಕೊಡ್ಲಿಪೇಟೆಯಿಂದ ಹೊರಟು ಇದೇ ಮಾರ್ಗದಲ್ಲಿ ಅರಕಲಗೂಡು ತಲುಪಲಿದೆ.