ಪೊನ್ನಂಪೇಟೆ, ಮೇ ೫: ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಹಾಸನ ಜಿಲ್ಲೆಯ ರಾಮನಾಥಪುರದಲ್ಲಿ ನಡೆದ ನೃತ್ಯ ಸಂಗಮ ಕಾರ್ಯಕ್ರಮದಲ್ಲಿ ಪೊನ್ನಂಪೇಟೆಯ ೬ ವರ್ಷ ಪ್ರಾಯದ ಮುಕ್ಕಾಟಿರ ಹಿತೈಷಿ ನಾಣಯ್ಯ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಅವಾರ್ಡ್ ಪಡೆದುಕೊಂಡರು.

ಈಕೆ ಹರಿಹರ ಮುಕ್ಕಾಟಿರ ನವೀನ್ ನಾಣಯ್ಯ ಹಾಗೂ ಮುಕ್ಕಾಟಿರ ಮೌನಿ ನಾಣಯ್ಯ ದಂಪತಿಯ ಪುತ್ರಿಯಾಗಿದ್ದು, ಪೊನ್ನಂಪೇಟೆಯ ನಾಟ್ಯ ಸಂಕಲ್ಪ ನೃತ್ಯ ಶಾಲೆಯ ವಿದ್ಯಾರ್ಥಿನಿ.