ಮುಳ್ಳೂರು, ಮೇ ೫: ಸಮೀಪದ ಮೂದ್ರವಳ್ಳಿ ಗ್ರಾಮದ ಎಂ.ಎA.ವಿಶ್ವನಾಥ್ ಅವರು ‘ಸ್ಟಡೀಸ್ ಆನ್ ಹೀಟ್ ಟ್ರಾನ್ಸ್ಫರ್ ಅಂಡ್ ಮಾಸ್ ಫ್ಲೋ ಇನ್ ವೆಲ್ಡಿಂಗ್ ಪ್ರೊಸೆಸ್ ಯೂಸಿಂಗ್ ಕಾಂಪಿಟೇಶನಲ್ ಅಪ್ರೋಚ್’ ತಾಂತ್ರಿಕ ಶೀರ್ಷಿಕೆಯಲ್ಲಿ ಮಂಡಿಸಿದ ಪ್ರಬಂಧಕ್ಕೆ ಬೆಂಗಳೂರು ವಿಶ್ವ ವಿದ್ಯಾನಿಲಯದ ಮೆಕಾನಿಕಲ್ ಇಂಜಿನಿಯರಿAಗ್ ವಿಭಾಗದಡಿಯಲ್ಲಿ ಪಿಎಚ್‌ಡಿ ಪದವಿ ಲಭಿಸಿದೆ. ೫೬ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಬೆಂಗಳೂರು ವಿ.ವಿ.ನಿಲಯದ ಕುಲಾಧಿಪತಿ, ಕುಲಪತಿ, ಸಿಂಡಿಕೇಟ್ ಸದಸ್ಯ ಮಂಡಳಿಯ ಸಮ್ಮುಖದಲ್ಲಿ ವಿಶ್ವನಾಥ್ ಅವರಿಗೆ ಪಿಎಚ್‌ಡಿ ಪದವಿ ನೀಡಿ ಗೌರವಿಸಲಾಯಿತು. ಪ್ರಸ್ತುತ ವಿಶ್ವನಾಥ್ ಬೆಂಗಳೂರು ನಾಗರಬಾವಿಯ ಅಂಬೇಡ್ಕರ್ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವನಾಥ್ ಶನಿವಾರಸಂತೆ ಸಮೀಪದ ಮೂದ್ರವಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಎಂ.ಆರ್.ಮಲ್ಲೇಶ್ ಮತ್ತು ನಿವೃತ್ತ ಶಿಕ್ಷಕಿ ಹೆಚ್.ಎಲ್. ಪದ್ಮಾವತಿ ದಂಪತಿಯ ಪುತ್ರ.