ಸುಂಟಿಕೊಪ್ಪ, ಮೇ ೪: ಜನತಾ ಕಾಲೋನಿಯ ಮಾಂಸ ಮಾರುಕಟ್ಟೆ ಮಳಿಗೆಯ ಮೇಲ್ಭಾಗದಲ್ಲಿ ಪಂಚಾಯಿತಿಯ ಕಟ್ಟಡದಲ್ಲಿ ನೂತನ ವರ್ಕ್ಸ್ಶಾಪ್ ಮಾಲೀಕರ ಸಂಘದ ಕಛೇರಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವರ್ಕ್ಸ್ ಶಾಪ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಆರ್. ಸುನಿಲ್ಕುಮಾರ್ ವಹಿಸಿದ್ದರು. ಈ ಸಂದರ್ಭ ಗ್ರಾ. ಪಂ.ಸದಸ್ಯರಾದ ಪಿ.ಎಫ್. ಸಬಾಸ್ಟೀನ್, ರಫೀಕ್ಖಾನ್, ಸೋಮನಾಥ್, ಶಾಂತಿ, ನಿಕಟಪೂರ್ವ ಅಧ್ಯಕ್ಷ ವಿ.ಎ. ಸಂತೋಷ್ ಮಾತನಾಡಿದರು. ಮಾಜಿ ಕಾರ್ಯದರ್ಶಿ ಬಿ.ಎಸ್.ರಮೇಶ್, ಗೌರ ವಾಧ್ಯಕ್ಷ ವಿನೋದ್, ಕಾರ್ಯದರ್ಶಿ ಮಣಿ, ಸಹಕಾರ್ಯ ದರ್ಶಿ ಜಿಬಿನ್ ವರ್ಗೀಸ್, ಖಜಾಂಜಿ ಸಂದೀಪ್, ನಿರ್ದೇಶಕರುಗಳಾದ ಸತೀಶ್ ಆರ್, ಸತೀಶ್ ಕೆ.ಜಿ., ಯೇಸುದಾಸ್, ಹೂವೇಗೌಡ ಮತ್ತಿತರರು ಇದ್ದರು.