ಮಾದಾಪುರ, ಮೇ ೪: ಸಮೀಪದ ಆಶ್ರಯ ಕಾಲೋನಿಯ ಭಗತ್‌ಸಿಂಗ್ ಯುವಕ ಸಂಘದಿAದ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ರಕ್ತನಿಧಿ ಕೇಂದ್ರದ ಡಾ. ಕರುಂಬಯ್ಯ, ರಕ್ತದಾನದಿಂದ ಯಾವುದೇ ಅಪಾಯವಿಲ್ಲ. ದಾನಿಗಳು ನೀಡಿದ ರಕ್ತ ೩ ಜನ ರೋಗಿಗಳ ಜೀವ ಉಳಿಸುತ್ತದೆ ಎಂದರು. ಕೊಡಗು ಜಿಲ್ಲಾ ಸಹಕಾರಿ ಭಾರತೀಯ ಅಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ ಮಾತನಾಡಿದರು. ಒಟ್ಟು ೪೬ ಮಂದಿ ರಕ್ತ ದಾನ ಮಾಡಿದರು. ರಕ್ತದಾನ ಮಾಡಿದವರಿಗೆ ಕೊಡಗು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವತಿಯಿಂದ ಅಭಿನಂದನಾ ಪತ್ರವನ್ನು ನೀಡಲಾಯಿತು.

ಈ ಸಂದರ್ಭ ಭಗತ್‌ಸಿಂಗ್ ಯುವಕ ಸಂಘದ ಅಧ್ಯಕ್ಷ ಮಂಜುನಾಥ್, ಡಾ. ರೋಶಿ, ಪೂರ್ಣಿಮಾ, ಉದ್ಯಮಿ ಕೊಪ್ಪತಂಡ ಗಣೇಶ್, ಪರಿಸರ ಪ್ರೇಮಿ ಅಣ್ಣು, ಸಮಾಜ ಸೇವಕ ಹರೀಶ್, ಸುಂಟಿಕೊಪ್ಪ ವಲಯ ಜೆಸಿಐ ಅಧ್ಯಕ್ಷ ಸತೀಶ್ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.