ನಾಪೋಕ್ಲು, ಮೇ ೪: ಸಮೀಪದ ಬೇತು ಗ್ರಾಮದ ಇತಿಹಾಸ ಪ್ರಸಿದ್ಧ ಸತ್ಯ ಸಂಧತೆಯ ಶ್ರೀ ಮಕ್ಕಿ ಶಾಸ್ತಾವು ದೇವರ ವಾರ್ಷಿಕ ಹಬ್ಬವು ವಿಜೃಂಭಣೆಯಿAದ ನಡೆಯಿತು.

ತಾ. ೩ ರಂದು ರಾತ್ರಿ ಅಂದಿಬೊಳ್‌ಕ್ (ದೀಪಾರಾಧನೆ) ಕಾರ್ಯಕ್ರಮ ನಂತರ ರಾತ್ರಿಯಿಂದ ಬೆಳಗ್ಗಿನವರೆಗೆ ವಿವಿಧ ದೇವರುಗಳ ಕೋಲ ನಡೆದು ತಾ. ೪ ರಂದು ಬೆಳಿಗ್ಗೆ ಕಲ್ಯಾಟ ಅಜ್ಜಪ್ಪ ದೇವರ ಕೋಲ ನಡೆಯಿತು. ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ ಏರ್ಪಾಡಿಸಲಾಯಿತು. ಅಪರಾಹ್ನ ಮಳೆಯಾಗಿದ್ದು ೨.೩೦ರ ಸಮಯದಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಕೋಲ, ಅಗ್ನಿಪ್ರವೇಶ ನಡೆದು ಈ ಸಂದರ್ಭ ಐದಾರು ತಿರೂಳ ಇದ್ದು, ಜನರಿಗೆ ಆರ್ಶ್ರೀವಾದ ನೀಡುತ್ತಿರುವುದು ಕಂಡು ಬಂತು. ಅನಂತರ ದೇವರಿಗೆ ಬಲಿ ಕಾರ್ಯಕ್ರಮದೊಂದಿಗೆ ಹಬ್ಬವು ಸಂಪನ್ನಗೊAಡಿತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ, ತಕ್ಕಮುಖ್ಯಸ್ಥರು ವಾರ್ಷಿಕ ಉತ್ಸವದ ನೇತೃತ್ವ ವಹಿಸಿದ್ದು, ಅರ್ಚಕ ಮಕ್ಕಿ ದಿವಾಕರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಮಳೆಯಿಂದ ಅಡಚಣೆ : ಮಧ್ಯಾಹ್ನದ ವೇಳೆವೆ ಮಳೆ ಸುರಿದಿದ್ದರಿಂದ ಪೂಜಾ ಕಾರ್ಯಗಳಿಗೆ ಅಡಚಣೆಯಾಯಿತು. ಒಂದೂವರೆ ಗಂಟೆಗಳ ಮಳೆ ಸುರಿದಿದ್ದರಿಂದ ಭಕ್ತಾದಿಗಳು ಪರದಾಡುವಂತಾಯಿತು.

ವಿಶೇಷತೆ ಎಂದರೆ ಕೊಡಗಿನ ಎಲ್ಲಾ ದೇವಳದಲ್ಲೂ ವಾರ್ಷಿಕವಾಗಿ ಒಂದು ಉತ್ಸವವಾದರೆ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತçವು ದೇವಳದಲ್ಲಿ ವಾರ್ಷಿಕವಾಗಿ ಎರಡು ಹಬ್ಬಗಳು ನಡೆಯುತ್ತದೆ. ಮೇ ತಿಂಗಳಲ್ಲಿ ಮತ್ತು ಡಿಸೆಂಬರ್ ತಿಂಗಳಲ್ಲಿ ನಡೆಯುತ್ತದೆ.

- ದುಗ್ಗಳ ಸದಾನಂದ