(ವಿಶೇಷ ವರದಿ, ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಮೇ ೫ : ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಹೂಳು ತುಂಬಿದ ಕೀರೆ ಹೊಳೆಗೆ ಇನ್ನೂ ಕೂಡ ಕಾಯಕಲ್ಪ ದೊರಕಿಲ್ಲ. ಮಳೆಗಾಲಕ್ಕೆ ಇನ್ನು ಒಂದು ತಿಂಗಳು ಅಷ್ಟೆ ಬಾಕಿ ಇದೆ. ಕಳೆದ ಬಾರಿ ಸುರಿದ ಬಾರಿ ಮಳೆಗೆ ಕೀರೆ ಹೊಳೆಯು ತುಂಬಿ ಅಪಾರ ನಷ್ಟ ಸಂಭವಿಸಿತ್ತು. ವರ್ಷಂಪ್ರತಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯು ಇದರ ಬಗ್ಗೆ ಅಷ್ಟಾಗಿ ಕಾಳಜಿ ವಹಿಸಿದಂತೆ ಕಾಣುತ್ತಿಲ್ಲ. ಕೀರೆ ಹೊಳೆ ಹಾಗೂ (ಮೊದಲ ಪುಟದಿಂದ) ಮಾಡಿದ್ದರೂ, ನೀರಿನ ಒಳ ಹರಿವು ತೀರಾ ಕಡಿಮೆ ಆಗಿದೆ. ಗಮನ ಸೆಳೆಯ ಬೇಕಾದ ಪಂಚಾಯಿತಿಯ ಜನಪ್ರತಿನಿಧಿಗಳು ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳ ಗಮನ ಸೆಳೆಯುವಲ್ಲಿ ಇಲ್ಲಿಯ ತನಕ ಯಾವುದೇ ಪ್ರಯತ್ನ ಮಾಡಿಲ್ಲ.

ಮುಂದಿನ ತಿಂಗಳಿನಲ್ಲಿ ಮಳೆ ಆರಂಭವಾಗುವ ಮುನ್ಸೂಚನೆ ಕಂಡು ಬಂದಿದೆ. ಕೀರೆ ಹೊಳೆಯನ್ನು ಶುದ್ದೀಕರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕೀರೆ ಹೊಳೆಗೆ ಸೇರುವ ಬೈಪಾಸ್ ರಸ್ತೆಯ ಕೈತೋಡು ಸಂಪೂರ್ಣ ಒತ್ತುವರಿಯಾಗಿದ್ದನ್ನು ಕಳೆದ ೬ ತಿಂಗಳ ಹಿಂದೆ ಆಗಿನ ತಾಲೂಕು ತಹಶೀಲ್ದಾರ್ ಯೋಗಾನಂದ್ ಖುದ್ದಾಗಿ ತೆರಳಿ ತೆರವು ಕಾರ್ಯ ಕೈಗೊಂಡಿದ್ದರು. ಇದೀಗ ಈ ತೋಡಿನಲ್ಲಿ ಗಿಡಗಂಟಿಗಳು ಬೆಳೆದು ತೋಡನ್ನು ಮುಚ್ಚಿ ಹಾಕಿವೆ. ಆದರೆ ಹಲವು ಮಂದಿ ಈ ತೋಡಿಗೆ ಪ್ರತಿನಿತ್ಯ ಕಸ ರಾಶಿಯನ್ನು ಸುರಿಯುತ್ತಿರುವುದು ಇನು ನಿಂತಿಲ್ಲ. ಈ ಬಗ್ಗೆ ಗಮನ ವಹಿಸಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ.

ಕೀರೆ ಹೊಳೆಯಲ್ಲಿ ಕಸದ ರಾಶಿ ಸಂಗ್ರಹಣೆಯಾಗುತ್ತಿರುವುದರಿAದ ಬಡಾವಣೆಗಳಲ್ಲಿರುವ ನಿವಾಸಿಗಳಿಗೆ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ. ರಸ್ತೆಯಲ್ಲಿ ಸಂಚಾರ ಮಾಡುವವರು ಮೂಗು ಮುಚ್ಚಿಕೊಂಡು ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ.

ಕೀರೆ ಹೊಳೆಯನ್ನು ಸಕಾಲದಲ್ಲಿ ಶುಚಿಗೊಳಿಸದೆ,ಹೂಳೆತ್ತದೆ ಇದ್ದಲ್ಲಿ ಇದರ ಬದಿಯಲ್ಲಿರುವ ನೂರಾರು ಮನೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗಿ ತೊಂದರೆ ಎದುರಿಸಬೇಕಾಗುತ್ತದೆ. ಮಳೆಯಿಂದ ಜನತೆ ನಷ್ಟ ಅನುಭವಸಿದ ಉದಾಹರಣೆಗಳಿವೆ. ಮಳೆಗಾಲಕ್ಕೂ ಮುನ್ನ ಪಂಚಾಯಿತಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಹಿತ ಕಾಪಾಡುವ ಜವಾಬ್ದಾರಿ ಪಂಚಾಯಿತಿಯ ಮೇಲಿದೆ. ಪಂಚಾಯಿತಿ ಕೂಡಲೇ ಕೀರೆ ಹೊಳೆ ಶುದ್ದೀಕರಣ ಮಾಡಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.