ಮಡಿಕೇರಿ, ಮೇ ೫: ಮಡಿಕೇರಿ ನಗರದಲ್ಲಿ ಕಳೆದ ವರ್ಷದ ಫೆಬ್ರವರಿ ೬ ರಂದು ದೇಶದ ರಾಷ್ಟçಪತಿಗಳಿಂದ ಉದ್ಘಾಟನೆಗೊಂಡಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂ (ಸನ್ನಿಸೈಡ್) ಜನಾಕರ್ಷಣೆ ಪಡೆಯುತ್ತಿದೆ. ದೇಶ ಪ್ರೇಮದೊಂದಿಗೆ ಸೇನೆಯ ಬಗ್ಗೆ ಗೌರವ ಮೂಡಿಸುವ ಪ್ರಯತ್ನ ಸಫಲತೆ ಕಾಣುತ್ತಿದ್ದು, ೨೦೨೧ರ ಮಾರ್ಚ್ನಿಂದ ೨೦೨೨ರ ಏಪ್ರಿಲ್ತನಕ ಸಾರ್ವಜನಿಕರಿಂದ ಟಿಕೆಟ್ ಮೂಲಕ ರೂ. ೧೨ ಲಕ್ಷ ಸಂಗ್ರಹವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಇದೇ ಅವಧಿಯಲ್ಲಿ ಸ್ಮಾರಕಭವನದ ನಿರ್ವಹಣೆಗೆಂದು ಸರಕಾರದ ಮೂಲಕ ೭.೭೫ ಲಕ್ಷ ಹಣ ಬಿಡುಗಡೆಯಾಗಿದೆ. ಸದರಿ ಅನುದಾನದಲ್ಲಿ ಪ್ರತಿ ತಿಂಗಳು ಭವನದ ನಿರ್ವಹಣೆಗಾಗಿ ದುರಸ್ತಿ, ವಿದ್ಯುತ್, ನೀರು, ಸಿಬ್ಬಂದಿಗಳ ವೇತನಕ್ಕೆಂದು ಕನಿಷ್ಟ ರೂ. ೧.೬೦ ಲಕ್ಷದಂತೆ ವ್ಯಯವಾಗಿರುವುದಾಗಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ತಿಳಿಸಿದ್ದಾರೆ.