ಗೋಣಿಕೊಪ್ಪ ವರದಿ, ಮೇ ೫: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಲೀಗ್ ಟೂರ್ನಿಯ ಗುರುವಾರದ ಪಂದ್ಯಗಳಲ್ಲಿ ೪ ತಂಡಗಳು ಗೆಲುವು ಸಾಧಿಸಿದವು.

ಬೊಳಿಯೂರ್ ತಂಡವು ಶ್ರೀಮಂಗಲ ಕೊಡವ ಸಮಾಜ ತಂಡವನ್ನು ೪-೧ ಗೋಲುಗಳಿಂದ ಮಣಿಸಿತು. ಬೊಳಿಯೂರ್ ತಂಡದ ಆಟಗಾರರಾದ ಬಿ.ಸಿ. ಪೆಮ್ಮಯ್ಯ, ನಾಚಪ್ಪ, ಕುಶಾಲಪ್ಪ, ಕವನ್ ಮುತ್ತಪ್ಪ, ಶ್ರೀಮಂಗಲ ತಂಡದ ಚಂಗಪ್ಪ ಗೋಲು ಹೊಡೆದರು.

ಬ್ಲೇಜ್ ತಂಡವು ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡದ ವಿರುದ್ಧ ೪-೦ ಗೋಲುಗಳಿಂದ ಜಯಿಸಿತು. ಬ್ಲೇಜ್ ಆಟಗಾರರಾದ ಸಜೀರ್, ಮಂಜು, ನಾಣಯ್ಯ, ಪ್ರಜ್ವಲ್ ತಲಾ ಒಂದೊAದು ಗೋಲು ಹೊಡೆದರು.

ಮಲೆನಾಡ್ ತಂಡಕ್ಕೆ ಕಿರುಗೂರ್ ವಿರುದ್ಧ ೬-೦ ಗೋಲುಗಳ ಭರ್ಜರಿ ಗೆಲುವು ಲಭಿಸಿತು. ಮಲೆನಾಡ್ ಆಟಗಾರರಾದ ವಚನ್, ಶಾನ್ ಬೋಪಯ್ಯ ತಲಾ ೨ ಗೋಲು, ಅಯ್ಯಪ್ಪ, ಗಣಪತಿ ತಲಾ ಒಂದೊAದು ಗೋಲು ಹೊಡೆದರು.

ಸೋಮವಾರಪೇಟೆ ಬ್ಲೂಸ್ಟಾರ್ ತಂಡವು ಶಿವಾಜಿ ತಂಡವನ್ನು ೧-೦ ಗೋಲುಗಳಿಂದ ಮಣಿಸಿತು. ವಂದನ್ ಏಕೈಕ ಗೋಲು ಹೊಡೆದರು.