ಪೊನ್ನಂಪೇಟೆ, ಮೇ ೫: ಬಲ್ಯಮುಂಡೂರು ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸುರಿದ ಗಾಳಿ - ಮಳೆಗೆ ದೇಯಂಡ ಮಾದಯ್ಯ ಮಣಿ ಎಂಬವರ ಮನೆ ಮೇಲೆ ತೆಂಗಿನ ಮರ ಬಿದ್ದು, ಮನೆಯ ಹೆಂಚುಗಳು ಒಡೆದು ಹೋಗಿವೆ. ಮನೆಯ ಮೇಲ್ಭಾಗ ಬಹುತೇಕ ಹಾನಿಗೊಳಗಾಗಿದೆ. ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಬೀಳುವ ಹಂತ ತಲುಪಿವೆ. ಮಾದಯ್ಯ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕಳೆದ ೪ ತಿಂಗಳಿನಿAದ ಹಾಸಿಗೆ ಹಿಡಿದಿದ್ದು, ಈಗ ಮಳೆಗೆ ಮನೆ ಹಾನಿಗೊಳಗಾಗಿ ರುವುದರಿಂದ ತೀವ್ರ ಸಂಕಷ್ಟಕ್ಕೊಳ ಗಾಗಿದ್ದಾರೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಪೊನ್ನಂಪೇಟೆ ತಹಶೀಲ್ದಾರ್ ಹಾಗೂ ಗ್ರಾ.ಪಂ. ಸದಸ್ಯ ಕೊಟ್ಟಂಗಡ ಅಯ್ಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.