ಸಿದ್ದಾಪುರ, ಮೇ ೪: ಸಿದ್ದಾಪುರ ಗ್ರಾಮದ ಬಜಕೊಲ್ಲಿ ಪೈಸಾರಿಯಲ್ಲಿ ಬೃಹತ್ ಗಾತ್ರದ ನಾಗರಹಾವನ್ನು ಸ್ನೇಕ್ ಸುರೇಶ್ ಸೆರೆ ಹಿಡಿದರು.

ಅಬ್ದುಲ್ ರೆಹಮಾನ್ ಎಂಬವರ ಮನೆಯೊಳಗೆ ಇದ್ದ ಆರು ಅಡಿ ಉದ್ದದ ನಾಗರ ಹಾವನ್ನು ಸ್ನೇಕ್ ಸುರೇಶ್ ಮತ್ತು ವಿನೋದ್ ಸೆರೆ ಹಿಡಿದು ಅಬ್ಬೂರು ಅರಣ್ಯಕ್ಕೆ ಬಿಟ್ಟರು. ಈಗ ಬಿಸಿಲಿನ ವಾತಾವರಣ ಜಾಸ್ತಿ ಆಗಿರುವುದರಿಂದ ಹಾವುಗಳು ನೀರು ಅರಸಿಕೊಂಡು ಬರುವುದು ಸಹಜ. ಯಾರೂ ಹಾವನ್ನು ಕೊಲ್ಲಬೇಡಿ. ಹಾವುಗಳನ್ನು ಕಂಡರೆ ೮೨೭೭೧೩೧೮೬೩ ದೂರವಾಣಿಯನ್ನು ಸಂಪರ್ಕಿಸಿ ಎಂದು ಸುರೇಶ್ ಮನವಿ ಮಾಡಿದ್ದಾರೆ.