ಸುAಟಿಕೊಪ್ಪ, ಮೇ ೪: ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಹಾಗೂ ನಾಪೋಕ್ಲು ಸಂತ ಮೇರಿ ಮಾತೆ ದೇವಾಲಯದ ಸಂಯುಕ್ತ ಆಶ್ರಯದಲ್ಲಿ ೧೧ನೇ ವರ್ಷದ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟ ಹಾಗೂ ಇತರ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ.

ತಾ.೭ ರಂದು ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುವ ಕ್ರೀಡಾಕೂಟದ ಉದ್ಘಾಟನೆಯನ್ನು ಸಮಾಜ ಸೇವಕ ಡಾ.ಮಂಥರ್‌ಗೌಡ ನೆರವೇರಿಸಲಿದ್ದು, ಆಶೀರ್ವಚನವನ್ನು ಮಡಿಕೇರಿ ವಲಯದ ಗುರು ಫಾ. ದೀಪಕ್ ಮಾಡಲಿರುವರು. ಅಧ್ಯಕ್ಷತೆಯನ್ನು ರೋಮನ್ ಕ್ಯಾಥೋಲಿಕ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎಂ.ಡಿಸಿಲ್ವಾ ವಹಿಸಲಿರುವರು, ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ವಲಯದ ಶ್ರೇಷ್ಠ ಗುರುಗಳಾದ ಫಾದರ್ ಮದಲೈ ಮುತ್ತು ಆಗಮಿಸಲಿದ್ದು, ಕ್ರೀಡಾಕೂಟದ ಉದ್ಘಾಟನೆಯನ್ನು ನಾಪೋಕ್ಲು ಸಂತ ಮೇರಿಮಾತೆ ದೇವಾಲಯದ ಧರ್ಮಗುರು ಜ್ಞಾನಪ್ರಕಾಶ್ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯೆ ವೀಣಾಅಚ್ಚಯ್ಯ, ರಾಜ್ಯ ಉಚ್ಚ ನ್ಯಾಯಾಲಯದ ವಕೀಲ ಎ.ಎಸ್. ಪೊನ್ನಣ್ಣ, ಸಮಾಜ ಸೇವಕ ಹರೀಶ್ ಬೋಪಣ್ಣ, ಮೈಸೂರಿನ ಇಗ್ನೇಶಿಯಸ್ ಮಸ್ಕರೆನಸ್ ಭಾಗವಹಿಸಲಿದ್ದಾರೆ.

ಕ್ರೀಡಾಕೂಟ ಸಮಾರೋಪ ಸಮಾರಂಭವನ್ನು ತಾ.೮ ರಂದು ಸಂಜೆ ೪ ಗಂಟೆಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯನವರು ನೆರವೇರಿಸಲಿದ್ದು, ವೀರಾಜಪೇಟೆ ವಲಯ ಶ್ರೇಷ್ಠ ಧರ್ಮಗುರು ಫಾ. ಮದಲೈಮುತ್ತು ಅವರ ಉಪಸ್ಥಿತಿಯಲ್ಲಿ ನಾಪೋಕ್ಲು ಧರ್ಮಗುರು ಫಾ. ಜ್ಞಾನಪ್ರಕಾಶ್ ಅಧ್ಯಕ್ಷತೆ ವಹಿಸಲಿರುವರು.

ಮುಖ್ಯ ಅತಿಥಿಗಳಾಗಿ ನಾಪೋಕ್ಲು ಗ್ರಾ.ಪಂ.ಅಧ್ಯಕ್ಷೆ ಪಾರ್ವತಿ, ಉಪಾಧ್ಯಕ್ಷ ಮೊಹಮ್ಮದ್ ಖುರೇಷಿ ಎಂ.ಇ., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಸದಾಶಿವ ಎಂ.ಕೆ. ಗ್ರಾ.ಪಂ. ಸದಸ್ಯರುಗಳಾದ ಕೆ.ಎ.ಇಸ್ಮಾಯಿಲ್, ಅರುಣ್ ಬೇಬ, ಸಾಬ ತಿಮ್ಮಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುರುಳಿ ಕರುಂಬಮಯ್ಯ, ಉದ್ಯಮಿ ಎಂ.ಎ.ಮನ್ಸೂರ್ ಆಲಿ, ಸಂತ ಮೇರಿ ಮಾತೆ ದೇವಾಲಯದ ಸಲಹಾ ಸಮಿತಿ ಸದಸ್ಯ ಡೈಸನ್ ವರ್ಗೀಸ್ ಆಗಮಿಸಲಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿನ ಸಾಧಕರು ಹಾಗೂ ಸಮಾಜ ಸೇವಕರಿಗೆ ಸನ್ಮಾನ ಕಾರ್ಯ ನಡೆಯಲಿದೆ. ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲೆಯಿಂದ ಒಟ್ಟು ೨೬ ತಂಡಗಳು ನೊಂದಾಯಿಸಿಕೊAಡಿವೆ ಎಂದು ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಪದಾಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.