ಮಡಿಕೇರಿ, ಮೇ ೪: ನಗರದ ಮುತ್ತಪ್ಪ ದೇವಾಲಯದ ಆವರಣದಲ್ಲಿ ಪಾರ್ವತಿ, ಸರಸ್ವತಿ, ಮಹಾಲಕ್ಷಿö್ಮ ಸಂಕಲ್ಪದಲ್ಲಿರುವ ಶ್ರೀ ಭಗವತಿ ದೇವಿಗೆ ತಾ.೮ರಂದು ಬೆಳಿಗ್ಗೆ ೯.೩೦ ಗಂಟೆಗೆ ಪೊಂಗಾಲ ಸೇವೆ ನಡೆಯಲಿದೆ ಎಂದು ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್ ಹಾಗೂ ಧರ್ಮದರ್ಶಿ ಕೆ.ಎಸ್. ರಮೇಶ್ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರುಗಳು ಈ ಬಗ್ಗೆ ಮಾಹಿತಿ ನೀಡಿದರು.
ಇದು ಕೇವಲ ಮಹಿಳೆಯರೇ ನಡೆಸುವ ಒಂದು ಪುಣ್ಯ ಕಾರ್ಯವಾಗಿದ್ದು, ಇಟ್ಟಿಗೆ ಅಥವಾ ಕಲ್ಲುಗಳನ್ನು ಜೋಡಿಸಿ ಒಲೆಯನ್ನು ಹಾಕಿ ಸೌದೆಗಳನ್ನು ಜೋಡಿಸಿ ಸಿದ್ಧಪಡಿಸಿದ ನಂತರ ಅರ್ಚಕರು ನೀಡಿದ ಕರ್ಪೂರದಾರತಿಯಿಂದ ಒಲೆ ಉರಿಸಿ, ಹೊಸ ಮಡಿಕೆಯಲ್ಲಿ ನೀರು ತುಂಬಿಸಿ ಪೊಂಗಾಲ ತಯಾರಿ ಮಾಡಲಾಗುತ್ತದೆ. ಪೊಂಗಾಲ ತಯಾರಿಗೆ ಬೇಕಾಗುವ ಹೊಸ ಮಡಿಕೆ, ಸೌದೆ, ಅಕ್ಕಿ, ಬೆಲ್ಲ, ಕಾಯಿ, ತುಪ್ಪ, ಏಲಕ್ಕಿ, ದ್ರಾಕ್ಷಿ, ಗೋಡಂಬಿ ಮುಂತಾದವುಗಳನ್ನು ದೇವಸ್ಥಾನದಿಂದಲೇ ಒದಗಿಸ ಲಾಗುವುದು.
ಪೊಂಗಾಲ ಸೇವೆ ಮಾಡಲಿಚ್ಚಿಸುವ ಮಹಿಳೆಯರು ತಾ.೬ರ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಸೇವೆ ಮಾಡಿಸುವ ಮಹಿಳೆಯರು ೩ ದಿನ ಶುದ್ಧಿಯಿಂದ ವ್ರತಮಾಡಿ ಶುಭ್ರ ವಸ್ತçಧಾರಿಗಳಾಗಿ ಸಿದ್ಧರಾಗಬೇಕು. ಹೆಚ್ಚಿನ ಮಾಹಿತಿಗೆ ದೂ. ೮೮೬೧೨೯೦೭೩೧, ೯೪೪೯೪೦೨೦೪೫ ಸಂಪರ್ಕಿಸಬಹುದಾಗಿದೆ ಎಂದು ಸುಧೀರ್ ಹಾಗೂ ರಮೇಶ್ ತಿಳಿಸಿದರು.
ಗೋಷ್ಠಿಯಲ್ಲಿ ಮುತ್ತಪ್ಪ ದೇವಾಲಯ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಮುತ್ತಪ್ಪ, ಮುತ್ತಪ್ಪ ಮಹಿಳಾ ವೇದಿಕೆ ಪ್ರಮುಖರುಗಳಾದ ರಾಣಿ ಮುತ್ತಮ್ಮ, ತಿಮ್ಮಯ್ಯ, ದೀಪಾ ಕಾವೇರಪ್ಪ ಉಪಸ್ಥಿತರಿದ್ದರು.