ಸೋಮವಾರಪೇಟೆ,ಮೇ ೪: ಮಾಲೀಕರು ಮನೆಯಲ್ಲಿಲ್ಲದ ಸಮಯ ಸಾಧಿಸಿದ ಕಳ್ಳರು ಮನೆಯೊಳಗೆ ನುಗ್ಗಿ ಚಿನ್ನಾಭರಣ ಮತ್ತು ನಗದು ದೋಚಿರುವ ಘಟನೆ ಪಟ್ಟಣದ ಬಾಣಾವಾರ ರಸ್ತೆಯಲ್ಲಿ ನಡೆದಿದೆ.

ಬಾಣಾವಾರ ರಸ್ತೆ ನಿವಾಸಿ ಕಾಫಿ ಬೆಳೆಗಾರ ಎನ್.ಎನ್.ರಮೇಶ್ ಮತ್ತು ಕುಟುಂಬದವರು ಕಳೆದ ಏಪ್ರಿಲ್ ೨೬ ರಂದು ಬೆಂಗಳೂರಿನಲ್ಲಿರುವ ತಮ್ಮ ಸಂಬAಧಿಕರ ಮನೆಗೆ ತೆರಳಿದ್ದರು. ನಿನ್ನೆ ದಿನ ರಮೇಶ್ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮನೆಯ ಮಲಗುವ ಕೋಣೆಯ ಕಿಟಕಿಯ ಸರಳುಗಳನ್ನು ಮುರಿದ ಕಳ್ಳರು ಕಪಾಟಿನಲ್ಲಿಟ್ಟಿದ್ದ ಚಿನ್ನದ ಓಲೆ, ಒಂದು ಜೊತೆ ಮುತ್ತಿನ ಓಲೆ, ನಗದು ಹಣ ಅಪಹರಿಸಿದ್ದಾರೆ. ಈ ಕುರಿತು ಎನ್.ಎನ್.ರಮೇಶ್ ಕೊಟ್ಟ ದೂರಿನ ಅನ್ವಯ ಸೋಮವಾರಪೇಟೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.