ವೀರಾಜಪೇಟೆ, ಮೇ ೪: ಕಾಕೋಟುಪರಂಬು ಸ್ಪೋಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ತಾ. ೨೬ ರಿಂದ ೨೯ ರವರೆಗೆ ಪುರುಷ ಹಾಗೂ ಮಹಿಳೆಯರಿಗೆ ಜಿಲ್ಲಾಮಟ್ಟದ ಪ್ರಥಮ ವರ್ಷದ ಹಿಂದೂ ಕಪ್ ಶೆಟಲ್ ಪಂದ್ಯಾಟ ಸ್ಪೋಟ್ಸ್ ಕ್ಲಬ್‌ನಲ್ಲಿ ನಡೆಸಲಾಗುವುದು ಎಂದು ಕ್ಲಬ್‌ನ ಅಧ್ಯಕ್ಷ ಮೇವಡ ಚಿಣ್ಣಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೦೦೮ ರಲ್ಲಿ ಪ್ರಾರಂಭಗೊAಡ ಕ್ಲಬ್ ಉತ್ತಮ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ೨೦೧೩ ರಿಂದ ೨೦೧೯ ರವರೆಗೆ ಜಿಲ್ಲಾಮಟ್ಟದ ಹಾಕಿ ಪಂದ್ಯಾಟಗಳನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಇದೆ. ಯುವ ಪೀಳಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ೩೦ ಲಕ್ಷ ವೆಚ್ಚದಲ್ಲಿ ವುಡನ್ ಶೆಟಲ್ ಕೋರ್ಟ್ ನಿರ್ಮಾಣ ಮಾಡಲಾಗಿದೆ. ಶೆಟಲ್ ಪಂದ್ಯಾಟ ವನ್ನು ಪುರುಷ ಕ್ರೀಡಾಪಟುಗಳ ವಯೊಮಿತಿಯ ಆಧಾರದ ಮೇಲೆ ಆಯೋಜಿಸಲಾಗಿದೆ. ಮಹಿಳೆಯರಿಗೆ ಒಂದೇ ವಿಭಾಗದಲ್ಲಿ ಪಂದ್ಯಾಟ ನಡೆಯಲಿದೆ. ೧೫ ರಿಂದ ೨೪, ೨೫ ರಿಂದ ೩೫, ೩೬ ರಿಂದ ೫೦, ೫೦ ರ ಮೇಲ್ಪಟ್ಟ ವಯೋಮಾನ ವಿಭಾಗದಲ್ಲಿ ಭಾಗವಹಿಸಬಹುದು. ಎಲ್ಲಾ ವಿಭಾಗದಲ್ಲಿ ಡಬಲ್ಸ್ಗೆ ಮಾತ್ರ ಅವಕಾಶ ನೀಡಲಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವವರು ತಾ. ೨೦ ರೊಳಗಾಗಿ ತಮ್ಮ ಹೆಸರನ್ನು ಕ್ಲಬ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಪಂದ್ಯಾಟದ ಪ್ರಥಮ ಹಾಗೂ ದ್ವಿತೀಯ ವಿಜೇತರಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ಹೇಳಿದರು.
ಖಜಾಂಚಿ ಬೇರೆರ ಬೆಳ್ಯಪ್ಪ ಮಾತನಾಡಿ, ತಾ. ೨೯ ರಂದು ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ೨೨, ೫೦ ಮೀಟರ್, ೧೨ನೇ ಬೋರ್ ೩೦ ಮೀಟರ್ ಅಂತರದಲ್ಲಿ ಆಯೋಜಿಸ ಲಾಗಿದೆ. ಜತೆಗೆ ಏರ್ ರೈಫಲ್ ಶೂಟಿಂಗ್‌ನ್ನು ನಡೆಸಲಾಗು ವುದು. ವಿಜೇತರಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ಹೇಳಿದರು. ಗೋಷ್ಠಿಯಲ್ಲಿ ನಿರ್ದೇಶಕರಾರ ಅಮ್ಮಂಡಿರ ಚೇತನ್, ಕೂತಂಡ ಸುರೇಶ್ ಉಪಸ್ಥಿತರಿದ್ದರು.