ಮಡಿಕೇರಿ,ಮೇ.೪: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜ.ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಗೌಡ ಜನಾಂಗದ ಟೆನ್ನಿಸ್ ಕ್ರಿಕೆಟ್ ಕುಟುಂಬ- ೨೦೨೨ ಪಂದ್ಯಾವಳಿಯಲ್ಲಿ ತಳೂರು, ಉಳುವಾರು, ಪರ್ಲಕೋಟಿ, ಮೂಲೆಮಜಲು, ಕುಡೆಕಲ್ಲು, ಬಳ್ಳಡ್ಕ, ದಂಬೆಕೋಡಿ, ಹೊಸೋಕ್ಲು ಕ್ವಾರ್ಟರ್ ಫೈನಲ್ಸ್ಗೆ ಪ್ರವೇಶಿಸಿವೆ.

ಇಂದು ನಡೆದ ಪ್ರಿ ಕ್ವಾರ್ಟರ್ ಪಂದ್ಯಾವಳಿಯಲ್ಲಿ ಕಟ್ಟೆಮನೆ ತಂಡ ೮ ವಿಕೆಟ್ ಕಳೆದುಕೊಂಡು ೩೮ರನ್ ಗಳಿಸಿತು. ಉಳುವಾರು ತಂಡ ೫ ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ತಳೂರು ತಂಡ ೭ವಿಕೆಟ್‌ಗೆ ೬೩ ರನ್ ಗಳಿಸಿದರೆ, ಹುದೇರಿ ತಂಡ ೨ವಿಕೆಟ್‌ಗೆ ೪೭ ರನ್ ಗಳಿಸಿ ೧೬ ರನ್‌ಗಳ ಅಂತರ ದಿಂದ ಸೋಲನುಭವಿಸಿತು. ಪರ್ಲಕೋಟಿ ತಂಡ ೬ವಿಕೆಟ್‌ಗೆ ೪೫ ರನ್ ಗಳಿಸಿದರೆ, ಪೊಡನೊಳನ ತಂಡ ೩ ವಿಕೆಟ್‌ಗೆ ೨೪ ರನ್ ಮಾತ್ರ ಗಳಿಸಿ ೨೧ರನ್‌ಗಳ ಅಂತರದಿAದ ಸೋಲನುಭವಿಸಿತು.

ತೆಕ್ಕಡೆ ತಂಡ ೫ ವಿಕೆಟ್‌ಗೆ ೬೩ ರನ್ ಗಳಿಸಿದರೆ, ಮೇಲ್ಚೆಂಬು ತಂಡ ೬ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಅಯ್ಯಂಡ್ರ ತಂಡ ೬ ವಿಕೆಟ್‌ಗೆ ೩೨ ರನ್‌ಗಳನ್ನು ಕಲೆ ಹಾಕಿದರೆ, ಕುಡೆಕಲ್ಲು ತಂಡ ೮ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಬಳ್ಳಡ್ಕ ತಂಡ ೫ವಿಕೆಟ್‌ಗೆ ೪೬ ರನ್ ಗಳಿಸಿದರೆ, ಪಾರೆಮಜಲು ತಂಡ ೫ವಿಕೆಟ್ ಕಳೆದುಕೊಂಡು ೪೨ ರನ್ ಗಳಿಸಿ ೪ ರನ್‌ಗಳ ಅಂತರದಿAದ ಸೋಲನುಭವಿಸಿತು. ಬೈಮನ ತಂಡ ೩ವಿಕೆಟ್‌ಗೆ ೩೬ ರನ್ ಗಳಿಸಿದರೆ, ದಂಬೆಕೋಡಿ ತಂಡ ೪.೧ಓವರ್‌ನಲ್ಲಿ ಒಂದು ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಬೊಳ್ತಜಿ ತಂಡ ೩ವಿಕೆಟ್‌ಗೆ ೫೬ ರನ್ ಕಲೆಹಾಕಿದರೆ, ಹೊಸೊಕ್ಲು ತಂಡ ೨ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು.