ಗೋಣಿಕೊಪ್ಪ ವರದಿ, ಮೇ ೪: ಅಮ್ಮತ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಕಪ್‌ನಲ್ಲಿ ೧೧ ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದವು.
ಮಚ್ಚಾರಂಡ ತಂಡ ಎರಡು ಗೆಲುವು ದಾಖಲಿಸಿತು. ಉಳಿದಂತೆ ಕೊಳುವಂಡ, ಮೇಕೇರಿರ, ನಂದಿನೆರವAಡ, ಕೊಟ್ಟಂಗಡ, ಚೆರ್‌ಮಂದAಡ, ಮಾಳೇಟಿರ (ಕೆದಮುಳ್ಳೂರು), ಮಣವಟ್ಟಿರ, ಮಾಚಿಮಾಡ, ಚಾರಿಮಂಡ ಹಾಗೂ ಪುಟ್ಟಿಚಂಡ ತಂಡಗಳು ಗೆಲುವಿನ ಸಿಹಿ ಅನುಭವಿಸಿದವು.
ಕೊಳುವಂಡ ೧ ವಿಕೆಟ್ ಕಳೆದುಕೊಂಡು ೫೮ ರನ್ ಗುರಿ ನೀಡಿತು. ತೀತಿರ (ಹರಿಹರ) ೧ ವಿಕೆಟ್‌ಗೆ ೨೫ ರನ್ ಗಳಿಸಿತು. ಅಚ್ಚಾಂಡಿರ ೬ ವಿಕೆಟ್ ನಷ್ಟಕ್ಕೆ ೧೪ ರನ್ ದಾಖಲಿಸಿತು. ಪಾಸುರ ವಿಕೆಟ್ ನಷ್ಟವಿಲ್ಲದೆ ೭ ಎಸೆಗಳಲ್ಲಿ ಗುರಿ ಮುಟ್ಟಿತು.
ಮೇಕೇರಿರ ತಂಡವು ಚೌರೀರ (ಹೊದ್ದೂರು) ತಂಡದ ವಿರುದ್ಧ ೯ ವಿಕೆಟ್ ಗೆಲುವು ಪಡೆಯಿತು. ಚೌರೀರ ೨ ವಿಕೆಟ್ ನಷ್ಟಕ್ಕೆ ೪೨ ರನ್ ಸೇರಿಸಿತು. ಮೇಕೇರಿರ ೧ ವಿಕೆಟ್ ಕಳೆದುಕೊಂಡು ೩೮ ರನ್ ಗಳಿಸಿತು. ನಂದಿನೆರವAಡ ೧ ವಿಕೆಟ್‌ಗೆ ೬೩ ರನ್ ದಾಖಲಿಸಿತು. ಬೊಳ್ಳೇರ ೫ ವಿಕೆಟ್ ಕಳೆದುಕೊಂಡು ೨೧ ರನ್ ಮಾತ್ರ ಗಳಿಸಿ ಸೋಲನುಭವಿಸಿತು.
ಚೆರುಮಂದAಡ ೬ ವಿಕೆಟ್ ನಷ್ಟಕ್ಕೆ ೩೮ ರನ್ ಗುರಿ ನೀಡಿತು. ಇದನ್ನು ಕೊಟ್ಟಂಗಡ ತಂಡ ೨ ಓವರ್‌ಗಳಲ್ಲಿ ಬಾರಿಸಿ ಜಯ ಸಾಧಿಸಿತು. ಮಚ್ಚಾರಂಡವು ಪಟ್ಟಡವನ್ನು ೨೩ ರನ್‌ಗಳಿಂದ ಮಣಿಸಿತು. ಪಟ್ಟಡ ೧ ವಿಕೆಟ್ ಕಳೆದುಕೊಂಡು ೨೩ ರನ್ ಗಳಿಸಿತು. ಮಚ್ಚಾರಂಡ ೩ ವಿಕೆಟ್ ಕಳೆದುಕೊಂಡು ೪೬ ರನ್ ಗಳಿಸಿತು.
ಮಚ್ಚಾರಂಡ ೨ ವಿಕೆಟ್ ನಷ್ಟಕ್ಕೆ ೪೩ ರನ್ ಪೇರಿಸಿತು. ಪೊನ್ನಿಮಾಡ ೯ ವಿಕೆಟ್ ಕಳೆದುಕೊಂಡು ೨೪ ರನ್ ಗಳಿಸಲಷ್ಟೆ ಶಕ್ತವಾಯಿತು. ಚೆರ್‌ಮಂದAಡ ತಂಡವು ನಾಪಂಡ ವಿರುದ್ಧ ೧ ರನ್‌ಗಳ ರೋಚಕ ಗೆಲುವು ಪಡೆಯಿತು. ಚೆರ್‌ಮಂದAಡ ವಿಕೆಟ್ ನಷ್ಟವಿಲ್ಲದೆ ೪೩ ರನ್‌ಗಳ ಗುರಿ ನೀಡಿತು. ನಾಪಂಡ ೨ ವಿಕೆಟ್ ಕಳೆದುಕೊಂಡು ೪೧ ರನ್ ಗಳಿಸಿ ವೀರೋಚಿತ ಸೋಲು ಅನುಭವಿಸಿತು.
ಕೊಳುವಂಡ ೨ ವಿಕೆಟ್ ನಷ್ಟಕ್ಕೆ ೩೧ ರನ್ ಪೇರಿಸಿತು. ಮಾಳೇಟಿರ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟಿತು. ಮಣವಟ್ಟಿರ ೨ ವಿಕೆಟ್ ನಷ್ಟಕ್ಕೆ ೪೭ ರನ್ ಬಾರಿಸಿತು. ಪಾಸುರ ೩ ವಿಕೆಟ್ ಕಳೆದುಕೊಂಡು ೩೩ ರನ್ ಮಾತ್ರ ಗಳಿಸಿ ಸೋಲನುಭವಿಸಿತು.
ಮಾಚಿಮಾಡ ೨ ವಿಕೆಟ್ ಕಳೆದುಕೊಂಡು ೬೭ ರನ್ ದಾಖಲಿಸಿತು. ಮಲ್ಲಂಡ ೫ ವಿಕೆಟ್ ಕಳೆದುಕೊಂಡು ೧೯ ರನ್ ಗಳಿಸಿ ಸೋಲೊಪ್ಪಿಕೊಂಡಿತು. ಚಾರಿಮಂಡ ೨ ವಿಕೆಟ್ ನೀಡಿ, ೩೩ ರನ್‌ಗಳ ಗುರಿ ನೀಡಿತು. ನಾಟೋಳಂಡ ೨ ವಿಕೆಟ್ ಕಳೆದುಕೊಂಡು ೩೧ ರನ್ ಗಳಿಸಿ ನಿರಾಸೆ ಅನುಭವಿಸಿತು.
ಪುಟ್ಟಿಚಂಡ ತಂಡಕ್ಕೆ ತೀತೀರ (ಹರಿಹರ) ವಿರುದ್ಧ ೭ ವಿಕೆಟ್ ಗೆಲುವು ಲಭಿಸಿತು. ತೀತಿರ ೨ ವಿಕೆಟ್ ನಷ್ಟಕ್ಕೆ ೩೬ ರನ್ ದಾಖಲಿಸಿತು. ಪುಟ್ಟಿಚಂಡ ೩ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.