ಮಡಿಕೇರಿ, ಮೇ ೪: ವಿಳಂಬ ದಿಂದಲೇ ವಿವಾದವಾಗಿ ಮಾರ್ಪಟ್ಟು ಜನ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದ್ದ ಗಣಪತಿ ಬೀದಿ ರಸ್ತೆ ಅಗಲೀಕರಣ ಕಾಮಗಾರಿ ಇದೀಗ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿದೆ.
೨೦೧೭ ರಲ್ಲಿ ನಗರದ ಹೃದಯ ಭಾಗದಲ್ಲಿರುವ ಗಣಪತಿ ಬೀದಿ ಅಗಲೀಕರಣಕ್ಕೆ ಯೋಜನೆ ರೂಪಿಸ ಲಾಯಿತು. ೨೦೨೧ರಲ್ಲಿ ಅಗಲೀಕರಣ ಸಂಬAಧ ರಸ್ತೆ ಮಾರ್ಗದಲ್ಲಿ ನಿರ್ಮಿಸಿದ್ದ ಕಟ್ಟಡದ ಭಾಗಗಳನ್ನು ತೆರವುಗೊಳಿ ಸಲಾಯಿತು. ಕಾಮಗಾರಿಗೆ ಟೆಂಡರ್ ಪ್ರಕ್ರಿಯೆಯೂ ನಡೆದು ರಸ್ತೆಯನ್ನು ಅಗೆದು ಇನ್ನೇನು ಡಾಂಬರೀಕರಣ ಆರಂಭಿಸಬೇಕು ಎನ್ನುವಷ್ಟರಲ್ಲಿ ಗುತ್ತಿಗೆ ನೀಡಿದ ಬಗ್ಗೆ ಆಕ್ಷೇಪ ವ್ಯಕ್ತವಾಗಿ
(ಮೊದಲ ಪುಟದಿಂದ) ಕಾಮಗಾರಿ ವಿಳಂಬವಾಗ ತೊಡಗಿತ್ತು. ಇದರ ಪರಿಣಾಮ ಜನರಿಗೆ ಸಮಸ್ಯೆ ಉಂಟಾಯಿತು. ವಾಹನ ಸವಾರರು ಕಿರಿಕಿರಿ ಅನುಭವಿಸುವುದಲ್ಲದೆ ಧೂಳುಮಯ ರಸ್ತೆಯಿಂದ ಜನರು ನರಕಯಾತನೆ ಅನುಭವಿಸಬೇಕಾಯಿತು. ಈ ಸಂಬAಧ ಪ್ರತಿಭಟನೆ ಕೂಡ ನಡೆಸಲಾಯಿತು.
ಇವೆಲ್ಲ ಸಮಸ್ಯೆಗಳ ನಡುವೆ ೩ನೇ ನಗರೋತ್ಥಾನ ಯೋಜನೆಯಡಿ ರೂ. ೧.೫೦ ಕೋಟಿ ವೆಚ್ಚದಲ್ಲಿ ಇದೀಗ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಹೆಚ್ಚುವರಿಯಾಗಿ ವಿದ್ಯುತ್ ಹಾಗೂ ಪೈಪ್ ಲೈನ್ ಸಂಬAಧಿತ ಕಾಮಗಾರಿಗೆ ರೂ. ೪೮ ಲಕ್ಷ ವೆಚ್ಚ ತಗುಲಿದ್ದು, ಒಟ್ಟು ರೂ. ೧.೯೮ ಕೋಟಿಯಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ. ಒಟ್ಟು ೭೩೦ ಮೀಟರ್ ಉದ್ದ, ೯ ಮೀಟರ್ ಅಗಲದ ರಸ್ತೆ ಇದಾಗಿದೆ. ಕಾಮಗಾರಿ ಪೂರ್ಣಗೊಂಡ ಬಗ್ಗೆ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ನಗರಸಭೆ ಪೌರಾಯುಕ್ತ ರಾಮದಾಸ್, ಕಾಮಗಾರಿ ಗುಣಮಟ್ಟದಲ್ಲಿ ಕೂಡಿದೆ. ೫ ವಿದ್ಯುತ್ ಪೋಲ್ಗಳ ಸ್ಥಳಾಂತರ ಮಾತ್ರ ಬಾಕಿ ಇದೆ. ಅದನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.