ಕೂಡಿಗೆ, ಮೇ ೪: ಕೂಡಿಗೆ, ಕೂಡುಮಂಗಳೂರು, ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಆಲಿಕಲ್ಲು ಮಳೆಯಿಂದಾಗಿ ಫಸಲು ಬಂದಿರುವ ಮಾವಿನ ಕಾಯಿಗಳು ಉದುರುತ್ತಿದ್ದು, ಆಲಿಕಲ್ಲು ಬಿದ್ದ ಜಾಗದಲ್ಲಿ ಕೊಳೆಯಲು ಆರಂಭವಾಗಿದೆ.

ಈ ಸಾಲಿನಲ್ಲಿ ಮಾವಿನಕಾಯಿಯ ಫಸಲು ಉತ್ತಮವಾಗಿ ಬಿಟ್ಟಿದೆ. ಈಗಾಗಲೇ ಸಣ್ಣ ಪ್ರಮಾಣದಲ್ಲಿ ಕಾಯಿ ಬಿಟ್ಟಿದ್ದು, ಆಲಿಕಲ್ಲು ಮಳೆ ಬಿದ್ದ ಪರಿಣಾಮ ಮಾವಿನಕಾಯಿಗಳು ಬೀಳುತ್ತಿವೆ.

ಹೆಚ್ಚು ಮಾವಿನ ಮರಗಳನ್ನು ಹೊಂದಿರುವ ಹುದುಗೂರು, ಸಿದ್ದಲಿಂಗಪುರ, ಸೀಗೆಹೊಸೂರು, ಮದಲಾಪುರ, ಭುವನಗಿರಿ, ಶಿರಂಗಾಲ, ಅಳುವಾರ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಯಿಂದ ಈ ಭಾಗದ ರೈತರಿಗೆ ನಷ್ಟವಾಗುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.