ಮಡಿಕೇರಿ, ಮೇ ೫: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ೧೦ ದಿನಗಳ ಕಾಲ ನಡೆದ ಗೌಡ ಜನಾಂಗ ಬಾಂಧವರ ನಡುವಿನ ಕೌಟುಂಬಿಕ ಟೆನ್ನಿಸ್ ಬಾಲ್ ಕ್ರಿಕೆಟ್ ಕುಟುಂಬ -೨೦೨೨ ಚಾಂಪಿಯನ್ ಆಗಿ ದಂಬೆಕೋಡಿ ತಂಡ ಹೊರಹೊಮ್ಮಿದೆ. ತಳೂರು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

ಇAದು ನಡೆದ ಅಂತಿಮ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್‌ಮಾಡಿದ ದಂಬೆಕೋಡಿ ತಂಡ ಸೀಮಿತ ೮ ಓವರ್‌ಗಳಲ್ಲಿ ೩ ವಿಕೆಟ್ ಕಳೆದುಕೊಂಡು ೯೧ ರನ್ ಪೇರಿಸಿತು. ತಂಡದ ಪರ ಕೀರ್ತಿ ೨೫ ಎಸೆತಗಳಲ್ಲಿ ೯ ಸಿಕ್ಸರ್, ಒಂದು ಬೌಂಡರಿ ಸೇರಿದಂತೆ ೬೮ ರನ್ ಗಳಿಸಿ ಗಮನ ಸೆಳೆದರು. ಉತ್ತರವಾಗಿ ಆಡಿದ ತಳೂರು ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಭರವಸೆಯ ಆಟಗಾರ ವಿಕ್ಕಿ ಪ್ರಥಮ ಎಸೆತದಲ್ಲಿಯೇ ಔಟಾಗಿ ಪೆವಿಲಿಯನ್‌ಗೆ ಮರಳಿದರು.

ನಂತರ ಬಂದ ಆಟಗಾರರು ಕೂಡ ಔಟಾದರು. ಪ್ರತಿಕ್ ಆಸರೆಯಾಗಿ ನಿಂತು ೪ ಸಿಕ್ಸರ್ ಹಾಗೂ ೧ ಬೌಂಡರಿ ಸೇರಿ ೧೭ ಎಸೆತಗಳಲ್ಲಿ ೩೪ ರನ್ ಗಳಿಸಿ ತಂಡದ ಮೊತ್ತ ಏರಿಸುವಲ್ಲಿ ನೆರವಾದರು. ಆದರೂ ತಂಡ ೪ ವಿಕೆಟ್ ಕಳೆದುಕೊಂಡು ೬೨ ರನ್ ಗಳಿಸಿ ೨೯ ರನ್‌ಗಳ ಅಂತರದಿAದ ಸೋಲನುಭವಿಸಿ, ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.

ಸೆಮಿಫೈನಲ್ಸ್

ಇದಕ್ಕೂ ಮುನ್ನ ನಡೆದ ಸೆಮಿಫೈನಲ್ಸ್ ಪಂದ್ಯದಲ್ಲಿ ಕುಡೆಕಲ್ಲು ತಂಡ ೬ ಓವರ್‌ಗಳಲ್ಲಿ ೪ ವಿಕೆಟ್‌ಗೆ ೪೫ ರನ್ ಗಳಿಸಿದರೆ, ದಂಬೆಕೋಡಿ ತಂಡ ೪.೪. ಓವರ್‌ಗಳಲ್ಲಿ ೨ ವಿಕೆಟ್ ಕಳೆದುಕೊಂಡು ಗೆಲವು ಸಾಧಿಸಿ ಫೈನಲ್ ಪ್ರವೇಶಿಸಿತು. ಪರ್ಲಕೋಟಿ ತಂಡ ೩ ವಿಕೆಟ್‌ಗೆ ೪೮ ರನ್ ಗಳಿಸಿದರೆ, ತಳೂರು ತಂಡ ೪.೩ ಓವರ್‌ಗಳಲ್ಲಿ ೨ ವಿಕೆಟ್‌ಗೆ ೫೨ ರನ್ ಗಳಿಸಿ ಫೈನಲ್‌ಗೆ ಪ್ರವೇಶಿಸಿತು.

ವೈಯಕ್ತಿಕ ಪ್ರಶಸ್ತಿ

ಉತ್ತಮ ಕ್ಯಾಚರ್ ಪ್ರಶಸ್ತಿಯನ್ನು ಕುಡೆಕಲ್ಲು ಕೀರ್ತಿ ಪಡೆದುಕೊಂಡರೆ, ಫೈನಲ್ ಪಂದ್ಯದ ಪಂದ್ಯಪುರುಷೋತ್ತಮ ಪ್ರಶಸ್ತಿಯನ್ನು ದಂಬೆಕೋಡಿ ಕಾರ್ತಿಕ್ ಪಡೆದುಕೊಂಡರು.

(ಮೊದಲ ಪುಟದಿಂದ) ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರನಾಗಿ ತಳೂರು ವಿಕ್ಕಿ (೨೦ ಸಿಕ್ಸರ್), ಉತ್ತಮ ಬೌಲರ್ ಆಗಿ, ಬಳ್ಳಡ್ಕ ಜಿತೇಂದ್ರ (೯ ವಿಕೆಟ್), ಉತ್ತಮ ಬ್ಯಾಟ್ಸ್ಮೆನ್ ಆಗಿ ಬೈಮನ ರಂಜಿತ್ ಪಡೆದುಕೊಂಡರೆ, ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ತಳೂರು ವಿಕ್ಕಿ ಪಡೆದುಕೊಂಡರು.

ಬಹುಮಾನ ವಿತರಣೆ

ಸಂಜೆ ನಡೆದ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ಕುರುಂಜಿ ರೇಣುಕಾಪ್ರಸಾದ್, ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಯುವ ವೇದಿಕೆ ಉಪಾಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್ ಬೋಪಯ್ಯ, ನಗರಸಭಾ ಸದಸ್ಯರುಗಳಾದ ಮಹೇಶ್ ಜೈನಿ, ಸತೀಶ್‌ಕುಮಾರ್, ಕುಟ್ಟನ ಶ್ವೇತಾ ಪ್ರಶಾಂತ್, ಯುವ ವೇದಿಕೆ ಗೌರವ ಸಲಹೆಗಾರ ಯಾಲದಾಳು ಹರೀಶ್, ಕೆ.ಜಿ. ಮದನ್, ದಾನಿ ಡಾ. ಮಂಥರ್ ಗೌಡ, ಊರುಬೈಲು ಉಜ್ವಲ್ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.

ಸಂಗೀತ ಶಿಕ್ಷಕಿ ತೆಕ್ಕಡೆ ಕೀರ್ತಿ ಚಂದ್ರಶೇಖರ್ ಪ್ರಾರ್ಥಿಸಿದರೆ, ಕೋಚನ ಡೀನಾ ಅನೂಪ್ ಸ್ವಾಗತಿಸಿದರು. ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಕಾರ್ಯಕ್ರಮ ನಿರೂಪಿಸಿದರೆ, ನಿರ್ದೇಶಕ ಪುದಿಯನೆರವನ ರಿಶಿತ್ ಮಾದಯ್ಯ ವಂದಿಸಿದರು. ಕಟ್ಟೆಮನೆ ಸೋನಾಜಿತ್ ಬಹುಮಾನ ವಿತರಣಾ ಕಾರ್ಯ ನಡೆಸಿಕೊಟ್ಟರು. ಇದೇ ಸಂದರ್ಭ ಮಡಿಕೇರಿಯ ಕಲಾಕಾವ್ಯ ನಾಟ್ಯ ಶಾಲೆಯ ತಂಡದವರಿಗೆ ನಾಟ್ಯವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಮುಖ್ಯಸ್ಥೆ ವಿಧುಷಿ, ದುಗ್ಗಳ ಕಾವ್ಯಶ್ರೀ ಕಪಿಲ್ ಕಾರ್ಯಕ್ರಮ ನಡೆಸಿಕೊಟ್ಟರು.