ಮಡಿಕೇರಿ, ಮೇ ೪: ನಗರದ ನೂತನ ಖಾಸಗಿ ಬಸ್ ನಿಲ್ದಾಣದಲ್ಲಿ ಅಳವಡಿಸಲಾಗಿರುವ ‘ಕೌ ಗೇಟ್’ನ ಕಬ್ಬಿಣದ ರಾಡುಗಳ ಜೋಡಣೆ ಬಿಟ್ಟುಹೋಗಿದ್ದು, ಕರುವೊಂದರ ಕಾಲು ಇದಕ್ಕೆ ಸಿಲುಕಿ ಮುರಿತಗೊಂಡಿದೆ.

ಇದನ್ನು ಗಮನಿಸಿದ ಸ್ಥಳೀಯರು ನಗರಸಭಾ ಸದಸ್ಯ ಅರುಣ್ ಶೆಟ್ಟಿ ಅವರ ಗಮನಕ್ಕೆ ತಂದ ಬಳಿಕ ಸ್ಥಳೀಯರ ಸಹಕಾರದೊಂದಿಗೆ ಕರುವನ್ನು ರಕ್ಷಿಸಿ ವಾಹನದ ಮೂಲಕ ಪಶುಚಿಕಿತ್ಸಾಲಯಕ್ಕೆ ಚಿಕಿತ್ಸೆಗಾಗಿ ಕಳಿಸಲಾಯಿತು. ಈ ಹಿಂದೆ ಜೋಡಣೆ ಬಿಟ್ಟಿದ್ದ ರಾಡಿನಿಂದಾಗಿ ಶಾಲಾ ವಿದ್ಯಾರ್ಥಿನಿಯೋರ್ವಳ ಕಾಲು ಕೂಡ ಮುರಿತಗೊಂಡಿತ್ತು. ಇದೀಗ ತಡರಾತ್ರಿಯಲ್ಲಿ ಜೋಡಣೆ ಬಿಟ್ಟಿದ್ದ ರಾಡ್‌ಗಳನ್ನು ಜೋಡಣೆ ಮಾಡಲಾಗಿದೆ.