ಮಡಿಕೇರಿ, ಮೇ ೪: ಆಫ್ರಿಕಾ ಖಂಡದ ರ್ವಾಂಡಾದಲ್ಲಿ ಜರುಗಿದ ಈಸ್ಟ್ ಆಫ್ರಿಕನ್ ಕಪ್ ಟೆನ್ನಿಸ್ ಟೂರ್ನಮೆಂಟ್ನಲ್ಲಿ ೧೨ ವರ್ಷದೊಳಗಿನ ವಿಭಾಗದಲ್ಲಿ ಉಗಾಂಡ ರಾಷ್ಟçವನ್ನು ಪ್ರತಿನಿಧಿಸಿದ್ದ ಕೊಡಗಿನ ಯುವತಿ ಕಂಜಿತAಡ ದಾನ್ವಿ ದೇಚಮ್ಮ ತೃತೀಯ ಸ್ಥಾನದ ಸಾಧನೆ ಮಾಡಿದ್ದಾಳೆ.
ಉಗಾಂಡದಲ್ಲಿ ಉದ್ಯೋಗ ದಲ್ಲಿರುವ ಮೂಲತಃ ಸುಂಟಿಕೊಪ್ಪ ನಾಕೂರಿನವರಾದ ಕಂಜಿತAಡ ಬೋಪಣ್ಣ ಹಾಗೂ ಕೃತಿನ್ (ತಾಮನೆ ಅಡ್ಡಂಡ) ದಂಪತಿಯ ಪುತ್ರಿ ದಾನ್ವಿ ದೇಚಮ್ಮ ಐದು ವರ್ಷ ಪ್ರಾಯದಿಂದಲೇ ಟೆೆನ್ನಿಸ್ ಕ್ರೀಡೆಯಲ್ಲಿ ಸಾಧನೆ ತೋರುತ್ತಿದ್ದಾಳೆ. ೧೦ ವರ್ಷ ಹಾಗೂ ೧೨ ವರ್ಷ ವಯೋಮಿತಿಯ ವಿಭಾಗದಲ್ಲಿ ಉತ್ತಮ ಸಾಧನೆ ಮೂಲಕ ಉಗಾಂಡ ರಾಷ್ಟçವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಳು.
ಇದೀಗ ೧೨ರ ವಯೋಮಿತಿ ವಿಭಾಗದಲ್ಲಿ ರ್ವಾಂಡಾದಲ್ಲಿ ನಡೆದ ಈಸ್ಟ್ ಆಫ್ರಿಕನ್ ಟೆನ್ನಿಸ್ ಟೂರ್ನಮೆಂಟ್ನಲ್ಲಿ ಉಗಾಂಡವನ್ನು ಪ್ರತಿನಿಧಿಸಿದ್ದ ದಾನ್ವಿ ತೃತೀಯ ಸ್ಥಾನದೊಂದಿಗೆ ಪದಕದ ಸಾಧನೆ ಮಾಡಿದ್ದಾಳೆ. ಇದೀಗ ದಾನ್ವಿ ಸದ್ಯದಲ್ಲಿ ಬೆಂಗಳೂರಿನ ಜೆಜಿಐ ಕ್ರೀಡಾ ಶಾಲೆಗೆ ಸೇರ್ಪಡೆಯಾಗಲಿದ್ದು, ರೋಹನ್ ಬೋಪಣ್ಣ
(ಮೊದಲ ಪುಟದಿಂದ) ಅಕಾಡೆಮಿಯಲ್ಲಿ ಮುಂದಿನ ತರಬೇತಿ ಪಡೆಯಲಿದ್ದಾಳೆ. ಈ ಹಿಂದೆ ಆಫ್ರಿಕಾದಲ್ಲಿ ನಡೆದಿದ್ದ ಕೊಲೊಲೊ ಕಪ್ನಲ್ಲಿ ವಿಜೇತಳಾಗಿದ್ದ ಈಕೆ ಉಗಾಂಡ ರಾಷ್ಟçದ ೧೨ರ ವಯೋಮಿತಿ ವಿಭಾಗದಲ್ಲಿ ನಂಬರ್ ಒನ್ ಆಟಗಾರ್ತಿಯಾಗಿದ್ದಳು. ಭವಿಷ್ಯದಲ್ಲಿ ಈಕೆ ಭಾರತವನ್ನು ಟೆನ್ನಿಸ್ನಲ್ಲಿ ಪ್ರತಿನಿಧಿಸುವ ಆಸಕ್ತಿ ತೋರಿದ್ದು, ಇದೀಗ ರೋಹನ್ ಬೋಪಣ್ಣ ಅಕಾಡೆಮಿಯಲ್ಲಿ ತರಬೇತಿಗೆ ಭಾರತಕ್ಕೆ ಆಗಮಿಸುತ್ತಿದ್ದಾಳೆ.