ಮಡಿಕೇರಿ, ಮೇ ೩: ನಗರದ ಪೆನ್ಷನ್‌ಲೇನ್‌ನ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ತಾ. ೨ ರಂದು ಸಂಜೆ ೬ ಗಂಟೆಗೆ ಪಯ್ಯನೂರು ಆಚಾರ್ಯ ಈಶ್ವರನ್ ನಂಬೂದರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಆರಂಭಗೊAಡವು. ಮೊದಲು ಆಚಾರ್ಯ ವರಣಂ, ಪುಣ್ಯಾಹ ಶುದ್ಧಿ, ಸುದರ್ಶನ ಹೋಮ, ದೇವಿ ಪೂಜೆ, ಲಲಿತ ಸಹಸ್ರನಾಮಾರ್ಚನೆ ನಡೆದು ಮಂಗಳವಾರ ಮಹಾಗಣಪತಿ ಹೋಮ, ನವಕ ಪಂಚಗವ್ಯ, ಕಲಶಪೂಜೆ, ನವಕ ಪಂಚಗವ್ಯ ಕಲಶಾಭಿಷೇಕ, ಸರ್ವಾಲಂಕಾರ ಮಹಾಪೂಜೆ, ಪಾಷಾಣಮೂರ್ತಿ ದೈವದ ಕಲಶ ಪೂಜೆ, ಅಲಂಕಾರ ಪೂಜೆ ಬಳಿಕ ಉಡುಪಿ ಪೆರ್ಲಂಪಾಡಿಯ ನಾಗಪಾತ್ರಿಗಳಾದ ರಮಾನಂದ ಭಟ್ ಅವರಿಂದ ನಾಗದರ್ಶನ ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ ಪಾಷಾಣಮೂರ್ತಿ ದೈವಕೋಲ ಆರಂಭಗೊAಡಿತು.
ತಾ. ೪ ರಂದು (ಇಂದು) ಸಂಜೆ ೫ ಗಂಟೆಯಿAದ ಪಾಷಾಣಮೂರ್ತಿಗೆ ಅಗೆಲು ಸೇವೆ ನಡೆಯಲಿದೆ.