ಮಡಿಕೇರಿ, ಮೇ ೩: ಮೂರ್ನಾಡು ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯದಲ್ಲಿ ಕಡಿಯತ್ತೂರು ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಹಾತೂರು ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ಕಡಿಯತ್ತೂರು ತಂಡವು ಹಾತೂರು ತಂಡವನ್ನು ಸೋಲಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು ಕಡಿಯತ್ತೂರು ತಂಡವು ನಿಗದಿತ ೮ ಓವರ್ ಗಳಲ್ಲಿ ಕೊಪ್ಪಡ ಅಯ್ಯಪ್ಪ ಅವರ ಭರ್ಜರಿ ೬೯ ರನ್‌ಗಳ ನೆರವಿನಿಂದ ೧೧೪ ರನ್‌ಗಳನ್ನು ದಾಖಲಿಸಿತು. ಬೃಹತ್ ಗುರಿಯನ್ನು ಬೆನ್ನಟ್ಟಿದ ಹಾತೂರು ತಂಡವು ೭ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ ೮೦ ರನ್‌ಗಳಿಸಲು ಶಕ್ತವಾಯಿತು. ಪಂದ್ಯಾವಳಿಯ ಸರಣಿ ಶ್ರೇಷ್ಠ ಆಟಗಾರನಾಗಿ ಮತ್ತು ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮನಾಗಿ ಕಡಿಯತ್ತೂರು ತಂಡದ ಅಯ್ಯಪ್ಪ ಪ್ರಶಸ್ತಿ ಪಡೆದುಕೊಂಡರು, ಜೂನಿಯರ್ ಕ್ರಿಕೆಟ್ ವಿಭಾಗದಲ್ಲಿ ಬೆಟ್ಟಗೇರಿ ತಂಡವು ಫೈನಲ್ ಪಂದ್ಯದಲ್ಲಿ ಪೊನ್ನಂಪೇಟೆ ತಂಡವನ್ನು ಸೋಲಿಸಿ ಚಾಂಪಿಯನ್ ಆಯಿತು.
ಮಹಿಳೆಯರಿಗಾಗಿ ಏರ್ಪಡಿಸಿದ್ದ ಥ್ರೋಬಾಲ್ ಪಂದ್ಯದಲ್ಲಿ ಬಿಟ್ಟಂಗಾಲ ತಂಡವು ರೋಚಕ ಹಣಾಹಣಿಯಲ್ಲಿ ಪಾರಾಣೆ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಸಮಾರೋಪ ಸಮಾರಂಭ ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಾರಂಭದಲ್ಲಿ ರಾಷ್ಟಿçÃಯ
(ಮೊದಲ ಪುಟದಿಂದ) ಅಥ್ಲೇಟ್ ತೋರೆರ ದೇವಯ್ಯ ಅವರನ್ನು ಸನ್ಮಾನಿಸಲಾಯಿತು. ಅತಿಥಿಗಳಾಗಿ ಪೊಲೀಸ್ ಉಪನಿರೀಕ್ಷಕಿ ತುದಿಮಡ ಸವಿ, ಬೆಟ್ಟಗೇರಿ ಗ್ರಾಮ ಪಂಚಾಯಿತಿ ಸದಸ್ಯೆ ಚಳಿಯಂಡ ಕಮಲಾ, ಅಯ್ಯಂಗಡಿರ ಮುತ್ತಪ್ಪ, ಕಿರುಗೂರು ಗ್ರಾಮ ಪಂಚಾಯಿತಿ ಸದಸ್ಯ ಕಾಕೇರ ರವಿ, ಕೊಡಗು ಹೆಗ್ಗಡೆ ಸಮಾಜದ ಉಪಾಧ್ಯಕ್ಷ ಕೂರಕುಟ್ಟೀರ ಸರ ಚಂಗಪ್ಪ, ಕಾರ್ಯದರ್ಶಿ ಚಂಗಚAಡ ಕಟ್ಟಿ ಕಾವೇರಪ್ಪ, ಖಜಾಂಜಿ ಪಾನಿಕುಟ್ಟೀರ ಕುಟ್ಟಪ್ಪ, ಪಡಿಞರಂಡ ಪ್ರಭು ಕುಮಾರ್, ನಿರ್ದೇಶಕರಾದ ತೋರೆರ ಮುದ್ದಯ್ಯ, ಕೊಪ್ಪಡ ಪಟ್ಟು ಪಳಂಗಪ್ಪ, ತಂಬAಡ ಮಂಜು, ಚರ್ಮಂಡ ಪೂವಯ್ಯ, ಪಂದಿಕAಡ ಸುನಾ, ಮಲ್ಲಡ ಸುತಾ, ಮೂರೀರ ಕುಶಾಲಪ್ಪ, ಮೂರೀರ ಶಾಂತಿ, ಪ್ರಮುಖರಾದ ಮಂಡೇಡ ಬೆಳ್ಳಿಯಪ್ಪ, ಬೈರಿಕುಂದಿರ ಡಾಲಿ, ಬೈರಿಕುಂದಿರ ಉತ್ತಪ್ಪ, ಮಲ್ಲ್ಲಡ ತಿಮ್ಮಯ್ಯ ಹಾಜರಿದ್ದರು.