ಮಡಿಕೇರಿ, ಮೇ ೩: ಜಿಲ್ಲೆಯ ಮುಸ್ಲಿಂ ಬಾಂಧವರು ಒಂದು ತಿಂಗಳ ಉಪವಾಸವನ್ನು ಪೂರ್ಣಗೊಳಿಸಿ ಇಂದು ಈದುಲ್‌ಫಿತರ್ ಎಂಬ ರಂಝಾನ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ಜಿಲ್ಲಾ ಕೇಂದ್ರ ಮಡಿಕೇರಿಯ ಮುಖ್ಯ ಮಸೀದಿಗಳಾದ ಜಾಮಿಯ, ಬದ್ರಿಯಾ, ಭಟ್ಕಳ್, ಎಮ್. ಎಮ್ . ಸೇರಿದಂತೆ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲೂ ಬೆಳಿಗ್ಗೆ ಹಬ್ಬದ ವಿಶೇಷ ನಮಾಜ್ ನಡೆಯಿತು. ಹಬ್ಬದ ಪ್ರಧಾನ ಸಂಕೇತವಾದ ಧಾನ್ಯ ದಾನವನ್ನೂ ಮಾಡಿದ ಮುಸ್ಲಿಂ ಬಾಂಧವರು, ಮಸೀದಿಗಳಲ್ಲಿನ ನಮಾಝ್‌ನ ಬಳಿಕ ಮಡಿಕೇರಿಯ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ತೆರಳಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದರು. ಮೆರವಣಿಗೆಯ ಉದ್ದಕ್ಕೂ ‘ಅಲ್ಲಾಹು ಅಕ್ಬರ್’ ಎಂಬ ದೈವ ಕೀರ್ತನೆ ಕೇಳಿ ಬಂತು. ಪ್ರಾರ್ಥನೆ ಕಾರ್ಯ ನೆರವೇರಿಸಿದ ಬಳಿಕ ಬಂಧುಮಿತ್ರರ ಮನೆಗಳಿಗೆ ತೆರಳಿ ಪರಸ್ಪರ ಹಬ್ಬದ ಶುಭಾಶಯಗಳನ್ನು ಹಂಚಿಕೊAಡರು.

ಧರ್ಮ ಗುರುಗಳಾದ ಅಬೂಬಕ್ಕರ್ ದಾರಿಮಿ, ಹಮೀದ್ ಮದನಿ, ಮೊಹಮ್ಮದ್ ಅಲಿ ಲತೀಫೀ ಮುಂತಾದವರು ಪಾಲ್ಗೊಂಡಿದ್ದರು. ಬದ್ರಿಯಾ ಮಸೀದಿಯಲ್ಲಿ ಅಬೂಬಕ್ಕರ್ ಸಿದ್ದಿಕಿ ದಾರಿಮಿ ಅವರು ಧಾರ್ಮಿಕ ಪ್ರವಚನ ನೀಡಿದ ಬಳಿಕ ಮೆರವಣಿಗೆ ಆರಂಭವಾಯಿತು. ಚೌಕಿ, ಮಹದೇವಪೇಟೆ ಮುಖಾಂತರ ಈದ್ಗಾ ಮೈದಾನದಲ್ಲಿ ಮೆರವಣಿಗೆ ಸಮಾಪನಗೊಂಡಿತು. ಜಾಮಿಯಾ ಮಸೀದಿ ಧರ್ಮಗುರುಗಳಾದ ಮುಫ್ತಿ ತಪ್‌ಸೀರ್ ರಝಾ ಕದ್ರಿ ಅವರು ಧಾರ್ಮಿಕ ಪ್ರವಚನ ನೀಡಿದ ಬಳಿಕ ಸಾಮೂಹಿಕ ಪ್ರಾರ್ಥನೆ ನೆರವೇರಿತು. ನಂತರ ಖಬರಸ್ಥಾನದಲ್ಲಿ ಅಗಲಿದ ಹಿರಿಯರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿರುವ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬವನ್ನು ಶ್ರದ್ಧೆ ಹಾಗೂ ಸಂಭ್ರಮದಿAದ ಆಚರಿಸಿದರು.

ಬೆಳಿಗ್ಗೆ ಪ್ರಾರ್ಥನಾ ಮಂದಿರಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಮುದಾಯ ಬಾಂಧವರು, ಪರಸ್ಪರ ಆಲಿಂಗಿಸಿ ರಂಜಾನ್ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಖಬರಸ್ತಾನಗಳಿಗೆ ತೆರಳಿ ಅಗಲಿದ ಕುಟುಂಬ ಸದಸ್ಯರ ಆತ್ಮಕ್ಕೆ ಶಾಂತಿ ಕೋರಿದರು. ರಂಜಾನ್ ಹಿನ್ನೆಲೆ ಮದರಸಗಳಲ್ಲಿ ವಿಶೇಷ ಉಪನ್ಯಾಸ, ಪ್ರಾರ್ಥನೆ ನಡೆಯಿತು. ಪಟ್ಟಣದ ಜಲಾಲಿಯಾ ಮಸೀದಿಯಲ್ಲಿ

(ಮೊದಲ ಪುಟದಿಂದ) ಧರ್ಮಗುರು ಅಜೀಜ್ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು. ಸಮೀಪದ ಕಲ್ಕಂದೂರು, ಬಜೆಗುಂಡಿ, ತಣ್ಣೀರುಹಳ್ಳ, ಕಾಗಡಿಕಟ್ಟೆ, ಹೊಸತೋಟದ ಬಟಕನಹಳ್ಳಿ ಜುಮಾ ಮಸೀದಿಗಳಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ದಾನಕ್ಕೆ ವಿಶೇಷ ಪ್ರಾಧಾನ್ಯತೆ ಇರುವ ರಂಜಾನ್ ಮಾಸದಲ್ಲಿ ಮುಸ್ಲಿಂ ಸಮುದಾಯದವರು ನಿರ್ಗತಿಕ ಬಡ ಕುಟುಂಬಗಳಿಗೆ ಧಾನ್ಯ, ವಸ್ತçಗಳನ್ನು ದಾನವಾಗಿ ನೀಡಿದರು.

ನಾಪೋಕ್ಲು: ಎಲ್ಲರೂ ಪರಸ್ಪರ ಪ್ರೀತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕೆಂದು ಹಳೇ ತಾಲೂಕು ಜಮಾಅತ್‌ನ ಖತೀಬರಾದ ಸಬೀರ್ ಇಮಾಮಿ ಹೇಳಿದರು.

ರಂಜಾನ್ ಹಬ್ಬದ ಪ್ರಯುಕ್ತ ಜಮಾಅತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವ ಪೀಳಿಗೆ ಕೆಟ್ಟ ಚಟಗಳಿಗೆ ಬಲಿಯಾಗಬಾರದು. ದೇಶದ ಪ್ರಗತಿಗೆ ಸಹಕರಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷ ಎಂ.ಎಸ್. ಮಹಮ್ಮದ್ ಅಲಿ, ಕಾರ್ಯದರ್ಶಿ ರಫೀಕ್, ಎಂ.ಎಸ್. ಇಬ್ರಾಹಿಂ, ಎ.ಹೆಚ್. ಇಬ್ರಾಹಿಂ, ಎಂ.ಪಿ. ಹಸೈನಾರ್, ಎ.ಎ. ಅಬೂಬಕ್ಕರ್, ಮತ್ತಿತರರು ಇದ್ದರು.

ಚೆರಿಯಪರಂಬು ಜಮಾಅತ್‌ನಲ್ಲಿ ರಂಜಾನ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಜಮಾಅತ್ ಖತೀಬಾ ಖಾದರ್ ಸಅದಿ ಉಸ್ತಾದ್ ಅವರ ನೇತೃತ್ವದಲ್ಲಿ ಈದ್ ನಮಾಜ್ ನೆರವೇರಿತು. ಕಾರ್ಯಕ್ರಮದಲ್ಲಿ ಜಮಾಅತ್ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.ವೀರಾಜಪೇಟೆ: ವೀರಾಜಪೇಟೆ ನಗರದ ವಿವಿಧ ಮಸೀದಿ ಈದ್ಗಾಗಳಲ್ಲಿ ವಿಶೇಷ ಈದ್ ನಮಾಝ್ ಹಾಗೂ ಪ್ರವಚನ ನಡೆಯಿತು.

ಮುಖ್ಯ ರಸ್ತೆಯ ಶಾಫಿ ಜುಮಾ ಮಸೀದಿಯಲ್ಲಿ ರವೂಫ್ ಹುದವಿ, ಖಾಸಗಿ ಬಸ್ ನಿಲ್ದಾಣದ ಶಾದುಲಿ ಜುಮಾ ಮಸೀದಿಯಲ್ಲಿ ಅಬ್ದುಲ್ಲಾ ಉಸ್ತಾದ್, ಬಂಗಾಳಿ ಬೀದಿಯ ಮಸ್ಜಿದ್-ಎ-ಅಝಮ್‌ನಲ್ಲಿ ಹಸೀಬ್ ಶರೀಫ್, ಸುಣ್ಣದಬೀದಿಯ ಮದೀನಾ ಮಸೀದಿಯಲ್ಲಿ ಮುಝಮ್ಮಿಲ್, ಕ್ಲಾಕ್ ಟವರ್ ಸಮೀಪದ ಮುರುಡೇಶ್ವರ್ ನವಾಯತ್ ಮಸೀದಿಯಲ್ಲಿ ಮಖ್ಸೂದ್ ಅಹಮದ್, ಅಪ್ಪಯ್ಯ ಸ್ವಾಮಿ ರಸ್ತೆಯ ಜಾಮಿಯಾ ಮಸೀದಿ ಯಲ್ಲಿ ಗುಲ್ಶದ್ ಅಹಮದ್, ಕಲ್ಲುಬಾಣೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಹನೀಫ್ ಫೈಝಿ ನಮಾಝ್ ಹಾಗೂ ಪ್ರವಚನಕ್ಕೆ ನೇತೃತ್ವ ವಹಿಸಿದ್ದರು.

ಗೋಣಿಕೊಪ್ಪ ರಸ್ತೆ ವಿದ್ಯಾನಗರ ಬ್ರೆöÊಟ್ ಕ್ಯಾಂಪಸ್ ಈದ್ಗಾದಲ್ಲಿ ಸಿ.ಅಲಿ, ಮಲಬಾರ್ ರಸ್ತೆಯ ಸಲಫಿ ಜುಮಾ ಮಸೀದಿ ಈದ್ಗಾದಲ್ಲಿ ಅಬ್ದುಲ್ ರೆಹೆಮಾನ್ ಸುಳ್ಯರವರು ಪ್ರವಚನ ನೀಡಿದರು. ಈದ್ಗಾಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದುದು ವಿಶೇಷವಾಗಿತ್ತು. ನಮಾಝ್ ನಂತರ ಸಮುದಾಯ ಬಾಂಧವರು ಪರಸ್ಪರ ಶುಭಾಶಯವನ್ನು ಹಂಚಿ ಮೆರವಣಿಗೆಯಲ್ಲಿ ತೆರಳಿ ಖಬರಸ್ಥಾನದಲ್ಲಿ ಅಗಲಿದ ಹಿರಿಯರಿಗೆ ಗೌರವ ಸಲ್ಲಿಸಿದರು.

ಕುಶಾಲನಗರ: ರಂಜಾನ್ ಹಬ್ಬದ ಅಂಗವಾಗಿ ಕುಶಾಲನಗರದಲ್ಲಿ ಮಸೀದಿ ಮತ್ತು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.

ಕುಶಾಲನಗರ ಜಾಮಿಯಾ ಮಸೀದಿ, ದಂಡಿನಪೇಟೆ, ಜನತಾ ಕಾಲೋನಿ ಮಸೀದಿಯ ಮುಸ್ಲಿಂ ಬಾಂಧವರು ಗಂಧದ ಕೋಟೆ ಬಳಿಯ ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರುಗಳಾದ ಜನಾಬ್ ಮುಫ್ತಿ ಮುತಾಬೀರ್ ಧಾರ್ಮಿಕ ಪ್ರವಚನ ನೀಡಿದರು. ಕುಶಾಲನಗರ ಹಿಲಾಲ್ ಮಸೀದಿ ಮತ್ತು ತಕ್ವಾ ಮಸೀದಿಗಳಲ್ಲಿ ಸಮುದಾಯ ಬಾಂಧವರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಹ್ಯಾಂಡ್ ಪೋಸ್ಟ್ನ ಮಸೀದಿಯಲ್ಲಿ ರಂಜಾನ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು.

ಹಬ್ಬದ ಪ್ರಯುಕ್ತ ಮಸೀದಿ ಧರ್ಮಗುರು ಹಾರಿಸ್ ಭಾಖವಿ ಧಾರ್ಮಿಕ ಪ್ರವಚನ ನೀಡಿ, ವಿಶ್ವ ಶಾಂತಿಗೋಸ್ಕರ ಪ್ರಾರ್ಥಿಸಿದರು. ಮಸೀದಿಯಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಸಮುದಾಯದವರಿಗೆ ತಂಪು ಪಾನೀಯ ವಿತರಿಸಲಾಯಿತು. ಸಿಹಿ ಹಂಚಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಡಿ.ಎ. ಸುಲೈಮಾನ್, ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಸದಸ್ಯರು ಹಾಜರಿದ್ದರು.ಕೊಟ್ಟಮುಡಿ: ಕೊಟ್ಟಮುಡಿ ಹಳೆ ಜುಮಾ ಮಸ್ಜಿದ್ ವತಿಯಿಂದ ಈದ್ ನಮಾಜ್ ನಂತರ ತಂಪು ಪಾನೀಯ ವಿತರಣೆ ನಡೆಯಿತು. ಮಸೀದಿ ಖತೀಬರಾದ ಮೊಹಮ್ಮದ್ ಸಖಾಫಿ ನಮಾಜಿಗೆ ನೇತೃತ್ವ ವಹಿಸಿದ್ದರು. ಸಿದ್ದಾಪುರದಲ್ಲಿ ಮುಸ್ಲಿಂ ಬಾಂಧವರು ಮಸೀದಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ರಂಜಾನ್ ಆಚರಣೆ ಮಾಡಿದರು.ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಸಂಭ್ರಮದಿAದ ಆಚರಿಸಿದರು ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಶನಿವಾರಸಂತೆ: ನಗರ ಮತ್ತು ಸುತ್ತಮುತ್ತಲಿನ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಸಡಗರದಿಂದ ಆಚರಿಸಿದರು. ಶನಿವಾರಸಂತೆ ಜಾಮೀಯ ಮಸೀದಿಯಲ್ಲಿ ಸೇರಿ ಕೆ.ಆರ್.ಸಿ. ವೃತ್ತದಲ್ಲಿರುವ ಈದ್ಗಾಕ್ಕೆ ಮೆರವಣಿಗೆ ತೆರಳಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.

ಜಾಮೀಯಾ ಮಸೀದಿಯ ಧರ್ಮಗುರುಗಳಾದ ಮಹಮ್ಮದ್ ಅಫ್‌ನಾನ್, ಗುಂಡೂರಾವ್ ಬಡಾವಣೆ ಮದೀನಾ ಮಸೀದಿಯ ಧರ್ಮಗುರುಗಳಾದ ಅಬ್ದುಲ್ಲಾ ಹಾಗೂ ಈದ್ಗಾ ಮಸೀದಿಯ ಧರ್ಮಗುರುಗಳಾದ ತೌಸೀಫ್ ಇವರುಗಳು ಪ್ರಾರ್ಥನೆ ಹಾಗೂ ಪ್ರವಚನ ನೇತೃತ್ವ ವಹಿಸಿದ್ದರು.ಕಡಂಗ: ಕಡಂಗ ಬದ್ರಿಯಾ ಜುಮಾ ಮಸೀದಿಯಲ್ಲಿ ಜಮಾಅತ್ ಖತೀಬ ರಿಯಾಜ್ ಫಾಳಿಲಿ ಉಸ್ತಾದರ ನೇತೃತ್ವದಲ್ಲಿ ಮುಹಿಯುದ್ದೀನ್ ಜುಮಾ ಮಸೀದಿ ಖತೀಬ ಹಮೀದ್ ದಾರಿಮಿ ಉಸ್ತಾದರ ನೇತೃತ್ವದಲ್ಲಿ ನಮಾಜ್ ನಡೆಯಿತು. ಮುಸ್ಲಿಂ ಬಾಂಧವರು ಹೊಸ ಉಡುಪುಗಳನ್ನು ತೊಟ್ಟು ಸಂಭ್ರಮದಿAದ ಹಬ್ಬವನ್ನು ಆಚರಿಸಿದರು. ಚೆಟ್ಟಳ್ಳಿ: ಕಂಡಕರೆಯ ಮಸ್ಜಿದ್ ತಖ್ವಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನೆರವೇರಿಸಿ ಮಾತನಾಡಿದ ಮಹಲ್ ಖತೀಬರಾದ ಮುಸ್ತಫಾ ಸಖಾಫಿ, ಯುವಜನತೆ ಆಧುನಿಕತೆಗೆ ಮರುಳಾಗಿ, ತಮ್ಮ ಜೀವನವನ್ನು ಹಾಳುಮಾಡಿಕೊಳ್ಳಬಾರದು. ಆದಷ್ಟು ಪುಣ್ಯ ಕೆಲಸಗಳಲ್ಲಿ ಭಾಗವಹಿಸಿ, ದೇವರ ಅನುಗ್ರಹ ಪಡೆಯಬೇಕೆಂದು ಕರೆ ನೀಡಿದರು.

ಈದುಲ್ ಫಿತರ್ ನಮಾಜಿನ ನಂತರ, ಕಂಡಕರೆಯ ಖಬರ್ ಸ್ಥಾನದಲ್ಲಿ ಮರಣ ಹೊಂದಿದವರಿಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಈ ಸಂದರ್ಭ ಮಸ್ಜಿದ್ ತಖ್ವಾ ಕಮಿಟಿ ಅಧ್ಯಕ್ಷ ಹಂಸ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಫಿ ಇನ್ನಿತರರು ಇದ್ದರು.ಕೂಡಿಗೆ: ಕೂಡಿಗೆಯಲ್ಲಿರುವ ಜುಮಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯ ಹಂಚಿಕೊAಡರು. ಈ ಸಂದರ್ಭ ಮಸೀದಿ ಸಮಿತಿಯ ಅಧ್ಯಕ್ಷ ಟಿ.ಪಿ. ಹಮೀರ್, ಕಾರ್ಯದರ್ಶಿ ಹಕೀಬ್, ಖಜಾಂಚಿ ನೌಫಲ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ. ಹಮೀದ್, ವಿವಿಧ ಘಟಕದ ಪದಾಧಿಕಾರಿಗಳು ಸೇರಿದಂತೆ ಸಮುದಾಯದವರು ಭಾಗವಹಿಸಿದ್ದರು.