ಶನಿವಾರಸAತೆ, ಮೇ ೩: ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಸಮಾಜದ ಸುಧಾರಣೆ ಮಾಡುವ ವ್ಯಕ್ತಿ ನಿತ್ಯ ಸ್ಮರಣೀಯರಾಗುತ್ತಾರೆ ಎಂದು ತಪೋವನ ಕ್ಷೇತ್ರ ಮನೆಹಳ್ಳಿ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಚಿನ್ನಳ್ಳಿ ರಸ್ತೆಯ ದೇವ್ಸ್ ರೆಸಾರ್ಟ್ನಲ್ಲಿ ನಿವೃತ್ತ ಸೈನಿಕರ ಸಂಘದ ವತಿಯಿಂದ ನಡೆದ ಮಾಜಿ ಸೈನಿಕ ದಿ. ಸುಬೇದಾರ್ ಎಂ.ಎನ್. ಧರ್ಮಪ್ಪ ಅವರ ‘ಸಂಸ್ಮರಣೆ-ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ವರ್ಷದ ನೆನಪು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹುಟ್ಟು-ಸಾವಿನ ನಡುವಿನ ಸಾರ್ಥಕತೆ ಸಾಧಿಸದ ಜೀವನ ಸಗಣಿಯ ಹುಳುವಿನಂತೆ ಎಂದು ಶಿವಶರಣರು ಹೇಳುತ್ತಾರೆ. ಧರ್ಮಪ್ಪ ಸೈನಿಕನಾಗುವ ವಿದ್ಯಾರ್ಥಿ ದೆಸೆಯ ಕನಸನ್ನು ನನಸಾಗಿಸಿಕೊಂಡು ದಕ್ಷ ಸೈನಿಕನಾಗಿ ೩ ಆಪರೇಶನ್‌ಗಳಲ್ಲಿ ಹೋರಾಡಿದವರು. ನಿವೃತ್ತಿಯ ನಂತರ ನಿವೃತ್ತ ಸೈನಿಕರ ಸಂಘ ಕಟ್ಟಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬದುಕು ಸಾಧಿಸಿದವರು ಎಂದು ಸ್ಮರಿಸಿದರು.
ಮಡಿಕೇರಿಯ ಕೆ.ಎಸ್.ಪಿ. ಅಧ್ಯಕ್ಷ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಮಾತನಾಡಿ, ಶಿಸ್ತಿನ ನಡವಳಿಕೆ, ಸಮಯಪ್ರಜ್ಞೆ, ಸಮಾಜಮುಖಿ ಕಾರ್ಯಗಳಿಂದ ಸೈನಿಕರು ಜನರ ಹೃದಯದಲ್ಲಿ ನಿತ್ಯ ಸ್ಮರಣೀಯರಾಗಿ ಉಳಿಯುತ್ತಾರೆ. ಸಂಸ್ಮರಣೆ ಕಾರ್ಯಕ್ರಮ ಅದಕ್ಕೆ ಪೂರಕವಾಗಿರುತ್ತದೆ ಎಂದರು.
ಕೆ.ಎಸ್.ಪಿ. ಉಪಾಧ್ಯಕ್ಷ ಕರ್ನಲ್ ಎಂ.ಎ. ಚಿನ್ನಪ್ಪ, ಕಾರ್ಯದರ್ಶಿ ಮೇಜರ್ ಸಿ.ಎಚ್. ಚಂಗಪ್ಪ, ಮುಖಂಡರಾದ ಎಸ್.ಎನ್. ರಘು, ಡಿ.ಬಿ. ಧರ್ಮಪ್ಪ, ವೆಂಕಟೇಶ್, ಆರ್.ಪಿ. ಲಕ್ಷö್ಮಣ್ ನುಡಿನಮನ ಸಲ್ಲಿಸಿದರು. ಧರ್ಮಪ್ಪ ಅವರ ಪುತ್ರಿ ಸುಪ್ರಿಯಾ, ಅಪ್ಪನ ಅಗಲಿಕೆಯ ನೋವನ್ನು ‘ನಮ್ಮಪ್ಪ ಸೂಪರ್ ಸ್ಟಾರ್’ ಕವಿತೆಯ ಮೂಲಕ ವ್ಯಕ್ತಪಡಿಸಿದರು.
ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ, ಸರ್ವ ಸದಸ್ಯರು, ಕುಟುಂಬ ವರ್ಗದವರು, ಸಂಘಸAಸ್ಥೆಯ ಪದಾಧಿಕಾರಿಗಳು, ವಿವಿಧ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಇತರರು ಪುಷ್ಪಾರ್ಚನೆಯಲ್ಲಿ ಪಾಲ್ಗೊಂಡರು. ಈ ಸಂದರ್ಭ ಧರ್ಮಪ್ಪ ಅವರ ಪತ್ನಿ ಶಾರದಾ ಹಾಗೂ ತಾಯಿ ನಿಂಗವ್ವ ಅವರನ್ನು ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ ಸನ್ಮಾನಿಸಿ ಗೌರವಿಸಿದರು.
ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎ.ಎಸ್. ಮಹೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಗಂಗಾಧರ್, ಕಾರ್ಯದರ್ಶಿ ಎಸ್.ಎನ್. ಪಾಂಡು, ನಿರ್ದೇಶಕರು, ಸದಸ್ಯರು, ದೇವ್ಸ್ ರೆಸಾರ್ಟ್ ಮಾಲೀಕ ಎಸ್.ವಿ. ಜಗದೀಶ್, ಪ್ರಮುಖರಾದ ಬೆಳ್ಳಿಗೌಡ, ಶಂಭು, ಮಂಜೂರ್ ಪಟೇಲರು, ತಿಮ್ಮಯ್ಯ, ಕೃಷ್ಣೇಗೌಡ, ಚಂದ್ರಪ್ಪ, ನಾಗರಾಜ್, ಸೋಮಶೇಖರ್, ಪ್ರಸನ್ನ, ಕೃಷ್ಣಮೂರ್ತಿ, ವಿಜಯಲಕ್ಷಿö್ಮÃ, ಕಾಳಮ್ಮ, ಮಹತಿ, ಇತರರು ಉಪಸ್ಥಿತರಿದ್ದರು.