ಮಡಿಕೇರಿ, ಮೇ ೩: ಕರ್ಣಂಗೇರಿಯಲ್ಲಿರುವ ಶ್ರೀ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಧ್ವಜಾರೋಹಣ, ಗಣಪತಿ ಹೋಮ, ದೇವಿಗೆ ಅಭಿಷೇಕ, ತೀರ್ಥ ಸ್ನಾನದೊಂದಿಗೆ ಕಳಸಪೂಜೆ ನೈವೇದ್ಯ ಪ್ರಸಾದ ಹಾಗೂ ಮಹಾಮಂಗಳಾರತಿ ನೆರವೇರಿತು. ದೇವಾಲಯದ ಆವರಣದಲ್ಲಿ ರಥೋತ್ಸವದೊಂದಿಗೆ ತುಲಾಭಾರ, ಉರುಳು ಸೇವೆ ಮತ್ತಿತರ ಧಾರ್ಮಿಕ ಕಾರ್ಯಗಳೊಂದಿಗೆ ಅನ್ನದಾನ ನಡೆಯಿತು.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾನ ಸೇವೆ, ದೇವಿ ದರ್ಶನ ನಡೆಯಿತು. ದೇವಾಲಯದ ಧರ್ಮದರ್ಶಿಗಳಾದ ಗೋವಿಂದ ಸ್ವಾಮಿ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.