ಗೋಣಿಕೊಪ್ಪ ವರದಿ, ಮೇ ೩: ಅಮ್ಮತ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಕಪ್‌ನಲ್ಲಿ ಮಂಗಳವಾರ ೧೫ ತಂಡಗಳು ಗೆಲುವು ಸಾಧಿಸಿವೆ.

ಮೂಕಳಮಾಡ ತಂಡಕ್ಕೆ ಅಜ್ಜಮಕ್ಕಡ ವಿರುದ್ಧ ೯ ವಿಕೆಟ್‌ಗಳ ಜಯ ದೊರೆಯಿತು. ಅಜ್ಜಮಕ್ಕಡ ೨ ವಿಕೆಟ್ ನಷ್ಟಕ್ಕೆ ೧೬ ರನ್ ಮಾತ್ರ ದಾಖಲಿಸಿತು. ಮೂಕಳಮಾಡ ೧ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು.

ಕರೋಟೀರ ತಂಡ ಚೆಟ್ಟೀರವನ್ನು ೧೦ ವಿಕೆಟ್‌ಗಳಿಂದ ಮಣಿಸಿತು. ಚೆಟ್ಟೀರ ೫ ವಿಕೆಟ್ ನಷ್ಟಕ್ಕೆ ೩೭ ರನ್ ದಾಖಲಿಸಿತು. ಕರೋಟೀರ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟಿತು.

ಸೋಮೆಯಂಡಕ್ಕೆ ಆಪಟ್ಟೀರ ವಿರುದ್ಧ ೯ ವಿಕೆಟ್ ಗೆಲುವು ದೊರೆಯಿತು. ಆಪಟ್ಟೀರ ೩ ವಿಕೆಟ್ ನಷ್ಟಕ್ಕೆ ೫೪ ರನ್ ದಾಖಲಿಸಿತು. ಸೋಮೆಯಂಡ ಕೇವಲ ೧ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು.

ಮುದ್ದಿಯಡಕ್ಕೆ ಬೊಪ್ಪಂಡ ವಿರುದ್ಧ ೨೨ ರನ್‌ಗಳ ಗೆಲುವು ದೊರೆಯಿತು. ಮುದ್ದಿಯಡ ೧ ವಿಕೆಟ್ ನಷ್ಟಕ್ಕೆ ೪೬ ರನ್ ದಾಖಲಿಸಿತು. ಬೊಪ್ಪಂಡ ೧ ವಿಕೆಟ್ ಕಳೆದುಕೊಂಡು ೨೪ ರನ್ ಮಾತ್ರ ಗಳಿಸಿತು.

ನಂಬುಡುಮಾಡ ತಂಡವು ಬೊಳ್ಳಚಂಡವನ್ನು ೧೦ ವಿಕೆಟ್‌ಗಳಿಂದ ಮಣಿಸಿತು. ಬೊಳ್ಳಚಂಡ ೨ ವಿಕೆಟ್ ನಷ್ಟಕ್ಕೆ ೨೪ ರನ್ ಗುರಿ ನೀಡಿತು. ನಂಬುಡುಮಾಡ ೨ ಓವರ್‌ಗಳಿಗೆ ೨೭ ರನ್ ಸಿಡಿಸಿ ಗೆಲುವು ಪಡೆಯಿತು.

ಮಾಳೆಯಂಡವು ಸೋಮೆಯಂಡವನ್ನು ೧೦ ವಿಕೆಟ್‌ಗಳಿಂದ ಸೋಲಿಸಿತು. ಸೋಮೆಯಂಡ ೨ ವಿಕೆಟ್ ಕಳೆದುಕೊಂಡು ೪೪ ರನ್ ದಾಖಲಿಸಿತು. ಮಾಳೆಯಂಡ ವಿಕೆಟ್ ನಷ್ಟವಿಲ್ಲದೆ ೪೫ ರನ್ ಬಾರಿಸಿತು.

ಕನ್ನಿಗಂಡವು ಮುದ್ದಿಯಡ ವಿರುದ್ಧ ೧೩ ರನ್‌ಗಳಿಂದ ಜಯಿಸಿತು. ಕನ್ನಿಗಂಡ ೪ ವಿಕೆಟ್ ನಷ್ಟಕ್ಕೆ ೬೦ ರನ್ ಗುರಿ ನೀಡಿತು. ಮುದ್ದಿಯಡ ೩ ವಿಕೆಟ್ ಕಳೆದುಕೊಂಡು ೪೬ ರನ್ ಗಳಿಸಲಷ್ಟೆ ಶಕ್ತವಾಯಿತು.

ಕುಂದೀರ ತಂಡ ಉದ್ದಪಂಡ ವಿರುದ್ಧ ೩೫ ರನ್‌ಗಳಿಂದ ಗೆದ್ದು ಬೀಗಿತು. ಕುಂದೀರ ೧ ವಿಕೆಟ್ ನಷ್ಟಕ್ಕೆ ೭೭ ರನ್ ಸಿಡಿಸಿತು. ಉದ್ದಪಂಡ ೩ ವಿಕೆಟ್ ಕಳೆದುಕೊಂಡು ೪೨ ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಕುAದೀರಕ್ಕೆ ೨ ನೇ ಪಂದ್ಯದಲ್ಲಿ ಪಂದ್ಯAಡ ವಿರುದ್ಧ ೫ ರನ್‌ಗಳ ಗೆಲುವು ದೊರೆಯಿತು. ಕುಂದೀರ ೧ ವಿಕೆಟ್ ನಷ್ಟಕ್ಕೆ ೪೩ ರನ್ ದಾಖಲಿಸಿತು. ಪಂದ್ಯAಡ ೭ ವಿಕೆಟ್ ಕಳೆದುಕೊಂಡು ೩೮ ರನ್ ಗಳಿಸಿ ಗುರಿ ಮುಟ್ಟುವಲ್ಲಿ ಎಡವಿತು.

ಮಂದನೆರವAಡ ತಂಡಕ್ಕೆ ಕುಂಡ್ರAಡ ವಿರುದ್ಧ ೯ ವಿಕೆಟ್ ಜಯ ಲಭಿಸಿತು. ಮಂದನೆರವAಡ ತಂಡ ೧ ವಿಕೆಟ್ ನಷ್ಟಕ್ಕೆ ೩೨ ರನ್ ಪೇರಿಸಿತು. ಕುಂಡ್ರAಡ ೩ ವಿಕೆಟ್ ಕಳೆದುಕೊಂಡು ೨೯ ರನ್ ಗಳಿಸಲಷ್ಟೇ ಶಕ್ತವಾಯಿತು.

೨ನೇ ಪಂದ್ಯ ಆಡಿದ ಮಂದನೆರವAಡ ತಂಡವು ನೆಲ್ಲೀರ ತಂಡವನ್ನು ೮ ವಿಕೆಟ್‌ಗಳಿಂದ ಸೋಲಿಸಿತು. ನೆಲ್ಲೀರ ೪ ವಿಕೆಟ್ ಕಳೆದುಕೊಂಡು ೩೮ ರನ್ ಗುರಿ ನೀಡಿತು. ಮಂದನೆರವAಡ ೨ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ಅಮ್ಮಣಿಚಂಡ ತಂಡವು ಚೇಂದAಡವನ್ನು ೧ ರನ್‌ಗಳಿಂದ ಮಣಿಸಿತು. ಅಮ್ಮಣಿಚಂಡ ೩ ಕ್ಕೆ ೨೬ ರನ್ ಗಳಿಸಿತು. ಚೇಂದAಡ ೩ ವಿಕೆಟ್ ಕಳೆದುಕೊಂಡು ೨೫ ರನ್ ಗಳಿಸಿ ೧ ರನ್‌ಗಳಿಂದ ವಿರೋಚಿತ ಸೋಲು ಅನುಭವಿಸಿತು.

ಅಮ್ಮಣಿಚಂಡವು ೨ನೇ ಪಂದ್ಯದಲ್ಲಿ ಕೋಳೇರ ತಂಡವನ್ನು ೯ ವಿಕೆಟ್‌ಗಳಿಂದ ಮಣಿಸಿತು. ಕೋಳೇರ ೫ ವಿಕೆಟ್‌ಗೆ ೫೦ ರನ್ ಗುರಿ ನೀಡಿತು. ಅಮ್ಮಣಿಚಂಡ ೧ ವಿಕೆಟ್ ನಷ್ಟದಲ್ಲಿ ೫೧ ರನ್ ದಾಖಲಿಸಿತು.

ಅರಮಣಮಾಡಕ್ಕೆ ತಾಚಮಂಡ ವಿರುದ್ಧ ೯ ವಿಕೆಟ್ ಗೆಲುವು ಲಭಿಸಿತು. ತಾಚಮಂಡ ೩ ವಿಕೆಟ್ ಕಳೆದುಕೊಂಡು ೩೨ ರನ್ ಸೇರಿಸಿತು. ಅರಮಣಮಾಡ ೧ ವಿಕೆಟ್ ಕಳೆದುಕೊಂಡು ೩೪ ರನ್ ಬಾರಿಸಿತು.

೨ನೇ ಪಂದ್ಯ ಆಡಿದ ಅರಮಣಮಾಡ ತಂಡವು ಮಂದೇಯAಡವನ್ನು ೭ ವಿಕೆಟ್‌ಗಳಿಂದ ಸೋಲಿಸಿತು. ಮಂದೇಯAಡ ೧ ವಿಕೆಟ್ ಕಳೆದುಕೊಂಡು ೬೫ ರನ್ ದಾಖಲಿಸಿತು. ಅಮರಮಣಮಾಡ ತಂಡವು ೩ ವಿಕೆಟ್ ಕಳೆದುಕೊಂಡು ೬೭ ರನ್ ಸಿಡಿಸಿತು.