ಮಡಿಕೇರಿ, ಮೇ ೩: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಜನಾಂಗದ ನಡುವೆ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ-೨೦೨೨ ಕ್ರಿಕೆಟ್ ಹಬ್ಬದಲ್ಲಿ ಬೊಳ್ತಜ್ಜಿ, ಹೊಸೊಕ್ಲು, ಬೈಮನ, ದಂಬೆಕೋಡಿ ತಂಡಗಳು ಪ್ರಿ ಕ್ವಾರ್ಟರ್ ಪೈನಲ್ ಹಂತಕ್ಕೆ ತಲುಪಿವೆ.

ಇಂದು ನಡೆದ ಪಂದ್ಯಾವಳಿಯಲ್ಲಿ ತೊತ್ತಿಯನ ತಂಡ ೬ ವಿಕೆಟ್‌ಗೆ ೪೩ ರನ್ ಗಳಿಸಿದರೆ, ಪೂಜಾರೀರ ತಂಡ ೧ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿ ೯ ವಿಕೆಟ್‌ಗಳ ಜಯ ಸಂಪಾದಿಸಿತು. ಕುಟ್ಟನ ತಂಡ ೪ ವಿಕೆಟ್‌ಗೆ ೬೭ ರನ್ ಗಳಿಸಿದರೆ, ಪಾಂಡಿ ತಂಡ ೬ ವಿಕೆಟ್‌ಗೆ ೨೪ ರನ್ ಮಾತ್ರ ಗಳಿಸಿ ೪೩ ರನ್‌ಗಳ ಅಂತರದಿAದ ಸೋಲನುಭವಿಸಿತು. ಕಾಳೆಯಂಡ ತಂಡ ೩ ವಿಕೆಟ್‌ಗೆ ೪೩ ರನ್ ಗಳಿಸಿದರೆ, ಅಯ್ಯೇಟಿ ತಂಡ ೩ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಪಾಣತ್ತಲೆ ತಂಡ ೫ ವಿಕೆಟ್‌ಗೆ ೪೧ ರನ್ ಗಳಿಸಿದರೆ, ಊರುಬೈಲು ತಂಡ ೪ ವಿಕೆಟ್ ನಷ್ಟದಲ್ಲಿ ಗುರಿ ಸಾಧನೆ ಮಾಡಿತು.

ಪೂಜಾರೀರ ತಂಡ ೩ ವಿಕೆÀಟ್‌ಗೆ ೫೬ ರನ್ ಕಲೆ ಹಾಕಿದರೆ ಕಲ್ಲುಮುಟ್ಲು ತಂಡ ೨ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಬೊಳ್ತಜ್ಜಿ ತಂಡ ೨ ವಿಕೆಟ್‌ಗೆ ೭೯ ರನ್ ಗಳಿಸಿದರೆ, ಕುಟ್ಟನ ತಂಡ ೬ ವಿಕೆಟ್‌ಗೆ ೪೯ ರನ್ ಗಳಿಸಿ ೩೦ ರನ್‌ಗಳ ಅಂತರದಿAದ ಸೋಲನುಭವಿಸಿತು. ಚೆರಿಯಮನೆ ತಂಡ ೮ ವಿಕೆಟ್‌ಗೆ ೩೯ ರನ್ ಗಳಿಸಿದರೆ, ಹೊಸೊಕ್ಲು ತಂಡ ೩ ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿತು. ದಂಬೆಕೋಡಿ ತಂಡ ೪ ವಿಕೆಟ್‌ಗೆ ೯೭ ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದರೆ, ಅಯ್ಯೇಟಿ ತಂಡ ೫ ವಿಕೆಟ್‌ಗೆ ೩೧ ರನ್ ಗಳಿಸಿ ೬೬ ರನ್‌ಗಳ ಅಂತರದಿAದ ಸೋಲನುಭವಿಸಿತು.

ಬೈಮನ ತಂಡ ೫ ವಿಕೆಟ್‌ಗೆ ೭೬ ರನ್ ಕಲೆ ಹಾಕಿದರೆ ಮೂಲೆಮಜಲು ತಂಡ ೭ ವಿಕೆಟ್‌ಗೆ ೩೭ ರನ್ ಗಳಿಸಿ ೪೫ ರನ್‌ಗಳ ಅಂತರದಿAದ ಸೋಲುಕಂಡಿತು. ಬೈಮನ ರಂಜಿತ್ ೧೮ ಎಸೆತಗಳಲ್ಲಿ ೬ ಸಿಕ್ಸರ್, ೨ ಬೌಂಡರಿಯೊAದಿಗೆ ೫೧ ರನ್ ಗಳಿಸಿ ಗಮನ ಸೆಳೆದರು. ಬೊಳ್ತಜ್ಜಿ ತಂಡ ೩ ವಿಕೆಟ್‌ಗೆ ೫೪ ರನ್ ಗಳಿಸಿದರೆ, ಊರುಬೈಲು ತಂಡ ೪ ವಿಕೆಟ್‌ಗೆ ೪೬ ರನ್ ಗಳಿಸಿ ೮ ರನ್‌ಗಳ ಅಂತರದಿAದ ಸೋಲನುಭವಿಸಿತು.

ಕಲ್ಲುಮುಟ್ಲು ತಂಡ ೫ ವಿಕೆಟ್‌ಗೆ ೨೯ ರನ್ ಗಳಿಸಿದರೆ, ದಂಬೆಕೋಡಿ ತಂಡ ೧ ವಿಕೆಟ್ ನಷ್ಟದಲ್ಲಿ ೩೩ ರನ್ ಗಳಿಸಿ ೯ ವಿಕೆಟ್‌ಗಳ ಜಯ ಸಂಪಾದಿಸಿತು. ಹೊಸೊಕ್ಲು ತಂಡ ೪ ವಿಕೆಟ್‌ಗೆ ೮೪ ರನ್ ಗಳಿಸಿದರೆ, ಕೋಡಿ ತಂಡ ೧ ವಿಕೆಟ್ ಕಳೆದುಕೊಂಡು ೭೫ ರನ್ ಗಳಿಸಿ ೯ ರನ್‌ಗಳ ಅಂತರದಿAದ ಸೋಲನುಭವಿಸಿತು.