ಸುಂಟಿಕೊಪ್ಪ, ಮೇ. ೨: ಸಂತ ಅಂತೋಣಿ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ಧ್ವಜಾರೋಹಣ, ಯಾಜಕಾಧೀಕ್ಷೆ, ಬಲಿಪೂಜೆಯನ್ನು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ. ಕೆ. ಎ. ವಿಲಿಯಂ ನೆರವೇರಿಸಿದರು.

ಸಂತ ಅಂತೋಣಿ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ಬಣ್ಣದ ಹೂ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಮಾದಾಪುರ ನಿರ್ಮಲ ಮಾತೆ ದೇವಾಲಯಕ್ಕೆ ಸೇರಿದ ಮಾದಾಪುರ ನಿವಾಸಿಗಳಾದ ಜೋನಿ ಕ್ರಾಸ್ತ ಮೇರಿ ಕ್ರಾಸ್ತ ದಂಪತಿ ಪುತ್ರ ರೋಯಲ್ ಕ್ರಾಸ್ತ ಅವರಿಗೆ ಧರ್ಮಾಧ್ಯಕ್ಷ ಕೆ.ಎ.ವಿಲಿಯಂ ಅವರು ಸಂತ ಮೇರಿ ಶಾಲಾ ಸಭಾಂಗಣದಲ್ಲಿ ನೂತನ ಗುರು (ಫಾದರ್) ದೀಕ್ಷೆಯನ್ನು ನೀಡಿದರು.

ಈ ಸಂದರ್ಭ ಎಲ್.ಜೊಹಾಸ್, ಮಾದಾಪುರ ಧರ್ಮಕೇಂದ್ರದ ಧರ್ಮಗುರುಗಳಾದ ರಾಜೇಶ್, ಮಡಿಕೇರಿ ವಲಯ ಧರ್ಮಗುರು ಗಳಾದ ದೀಪಕ್, ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಅರುಳ್ ಸೇಲ್ವಕುಮಾರ್, ವಿನ್ಸೆಂಟ್ ಮೊಂತೊರೊ, ಪಲ್ಲೊಟೈನ್ ಸಭೆಯ ಗುರುಗಳು, ಮೈಸೂರು ಧರ್ಮಕ್ಷೇತ್ರದ ವಿವಿಧ ಧರ್ಮ ಕೇಂದ್ರಗಳ ಧರ್ಮಗುರುಗಳು, ಅರ್ಸುಲೈನ್ ಕನ್ಯಾಸ್ತಿçÃಯರು, ಮಾದಾಪುರ, ಕುಂಬೂರು, ಹಟ್ಟಿಹೊಳೆ, ಸುಂಟಿಕೊಪ್ಪ ಭಾಗಗಳ ಕ್ರೆöÊಸ್ತಬಾಂಧವರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.