ಸಿದ್ದಾಪುರ, ಮೇ ೩: ವಿಶೇಷಚೇತನ ಯುವಕನ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ಮಾಡಿರುವ ಘಟನೆ ಸಂಬAಧಿಸಿದAತೆ ಪ್ರಕರಣ ದಾಖಲಾಗಿದೆ.

ಹಾಕತ್ತೂರಿನ ತೊಂಬತ್ತುಮನೆಯ ನಿವಾಸಿಯಾದ ಯುವಕ ಶರೀಫ್ ಹಾಕತ್ತೂರಿನ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಬಾಡಿಗೆಗೆ ಜ್ಯೂಸ್ ವ್ಯಾಪಾರ ಮಾಡುತ್ತಿದ್ದರು. ಈ ಅಂಗಡಿಯು ಬಿಳಿಗೇರಿ ಗ್ರಾಮದ ಚೇತನ್ ಹೆಸರಿನಲ್ಲಿದ್ದು, ಅಂಗಡಿಗೆ ರೂ. ೫೦ ಸಾವಿರದ ಸಾಮಗ್ರಿಗಳನ್ನು ಖರೀದಿಸಿ ಶರೀಫ್‌ಗೆ ನೀಡಿದ್ದರು. ಈ ಹಣವನ್ನು ಆ್ಯಪ್ ಮೂಲಕ ಶರೀಫ್ ವಾಪಾಸು ನೀಡಿದ್ದರು. ಕಳೆದ ತಾ. ೩೦ರಂದು ಚೇತನ್ ಅಂಗಡಿಗೆ ಬಂದು ಏಕಾಏಕಿ ಹಲ್ಲೆ ಮಾಡಿ, ದಿನ ರೂ. ೫೦೦ ಬಾಡಿಗೆ ಹಾಗೂ ಕರೆಂಟ್ ಬಿಲ್ ಕಟ್ಟುವಂತೆ ಹೇಳಿ ಅಂಗಡಿಯಲ್ಲಿದ್ದ ಕತ್ತಿಯಿಂದ ಬೀಸಿದಾಗ ಬಲ ಕಣ್ಣಿನ ಮೇಲ್ಭಾಗದಲ್ಲಿ ಗಾಯವಾಗಿದ್ದು, ಚೇತನ್ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಶರೀಫ್ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿ ವಿರುದ್ಧ ಐಪಿಸಿ ೫೦೪, ೫೦೬, ೩೨೩ ಮತ್ತು ೩೨೪ ಪ್ರಕಾರ ಪ್ರಕರಣ ದಾಖಲಾಗಿದೆ.