ಗೋಣಿಕೊಪ್ಪಲು, ಮೇ ೨: ನಿಲುಗಡೆಯಾಗಿದ್ದ ಕಾರಿಗೆ ನಿಯಂತ್ರಣ ಕಳೆದುಕೊಂಡ ಕಾರೊಂದು ಡಿಕ್ಕಿ ಆದ ಪರಿಣಾಮ ಕಾರಿನಲ್ಲಿದ್ದ ಸುಳ್ಳಿಮಾಡ ಬೋಜಮ್ಮ (೬೨) ಮೃತಪಟ್ಟ ಘಟನೆ ಗೋಣಿಕೊಪ್ಪಲು ವಿನಲ್ಲಿ ವರದಿಯಾಗಿದೆ.

ಬೆಕ್ಕೆಸೊಡ್ಲುರುವಿನ ನಿವಾಸಿ ಬೋಜಮ್ಮ ತಮ್ಮ ಬಂಧುಗಳ ನಾಮಕರಣ ಕಾರ್ಯಕ್ರಮ ಮುಗಿಸಿ ಗೋಣಿಕೊಪ್ಪ ನಗರಕ್ಕೆ ಆಗಮಿಸಿದ್ದರು. ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿಕೊಂಡಿದ್ದ ವೇಳೆ ಅಲ್ಲಿಗೆ ನಿಯಂತ್ರಣ ಕಳೆದುಕೊಂಡ ಮತ್ತೊಂದು ಕಾರು ಆಗಮಿಸಿ ಬೋಜಮ್ಮ ಕುಳಿತಿದ್ದ ಕಾರಿಗೆ ಡಿಕ್ಕಿ ಆಗಿದೆ.

ಈ ವೇಳೆ ಮಹಿಳೆ ಮ್ರತಪಟ್ಟಿದ್ದಾರೆ. ಮಾಹಿತಿ ತಿಳಿದ ಗೋಣಿಕೊಪ್ಪ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.