ಸುಂಟಿಕೊಪ್ಪ, ಮೇ ೨: ಮೊಬೈಲ್ ಚಾರ್ಜ್ ಮಾಡುವ ನೆಪದಲ್ಲಿ ಕಳ್ಳನೋರ್ವ ಗಲ್ಲ ಪೆಟ್ಟಿಗೆಗೆ ಕನ್ನ ಹಾಕಿ ಹಣವನ್ನು ಎಗರಿಸಿರುವ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ.
ನಿನ್ನೆ ದಿನ ಮಧ್ಯಾಹ್ನ ಅಪರಿಚಿತನೋರ್ವ ಸುಂಟಿಕೊಪ್ಪ ಪೂಜಾ ಕಾಂಪ್ಲೆಕ್ಸ್ನಲ್ಲಿರುವ ಲ್ಯಾಬ್ಗೆ ಬಂದಿದ್ದಾನೆ. ನನ್ನ ಕಡೆಯ ಇಬ್ಬರಿಗೆ ‘ಬ್ಲಡ್ ಟೆಸ್ಟ್’ ಮಾಡಿಸಬೇಕಿದೆ. ಅವರು ಬರುವ ತನಕ ಮೊಬೈಲ್ ಚಾರ್ಜ್ಗೆ ಇಟ್ಟಿರಿ ಎಂದೇಳಿದ್ದಾನೆ. ಅವನ ಮಾತನ್ನು ನಂಬಿದ ಲ್ಯಾಬ್ ಸಿಬ್ಬಂದಿ ಕುಳಿತುಕೊಳ್ಳಲು ಅನುವು ಮಾಡಿಕೊಟ್ಟು ಮೊಬೈಲ್ ಅನ್ನು ಚಾರ್ಜ್ಗೆ ಇಟ್ಟಿದ್ದಾರೆ. ಸ್ವಲ್ಪ ಸಮಯದ ನಂತರ ಸಿಬ್ಬಂದಿ ಲ್ಯಾಬ್ ನಿಂದ ಹೊರಗೆ ಬಂದಾಗ ಕ್ಯಾಷ್ ಬಾಕ್ಸ್ಗೆ ಕೈ ಹಾಕಿದ ಚೋರ ಅದರಲ್ಲಿದ್ದ ಹಣವನ್ನು ಜೇಬಿಗೆ ಕಳವು ಮಾಡಿದ್ದಾನೆ. ಸಿಬ್ಬಂದಿ ಮರಳಿ ಬಂದಾಗ ಚಾರ್ಜ್ಗೆ ಇಟ್ಟಿದ್ದ ಮೊಬೈಲ್ ಅನ್ನು ಪಡೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ. ನಂತರ ಕ್ಯಾಷ್ ಬಾಕ್ಸ್ ನೋಡಿದಾಗ ರೂ. ೨೪೦೦ ಕಳವಾಗಿರುವುದು ಕಂಡುಬAದಿದೆ. ಸುತ್ತಮುತ್ತಲೆಲ್ಲಾ ಹುಡುಕಾಡಿದರೂ ಕಳ್ಳನ ಪತ್ತೆಯಾಗಲಿಲ್ಲ. ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ.