ವೀರಾಜಪೇಟೆ, ಮೇ ೨: ಈದುಲ್ ಫಿತ್ರ್ ಪ್ರಯುಕ್ತ ವೀರಾಜಪೇಟೆ ನಗರದ ಸುತ್ತಮುತ್ತಲಿನ ಮಸೀದಿ ಮತ್ತು ಈದ್‌ಗಾಹ್‌ಗಳಲ್ಲಿ ತಾ. ೩ರಂದು (ಇಂದು) ನಮಾಝ್ ಹಾಗೂ ಈದ್ ಪ್ರವಚನ ಈ ಕೆಳಗಿನಂತೆ ನಡೆಯಲಿವೆೆ.

ನಗರದ ಮುಖ್ಯ ರಸ್ತೆಯ ಶಾಫಿ ಜುಮಾ ಮಸೀದಿಯಲ್ಲಿ ಬೆಳಿಗ್ಗೆ ೯:೦೦ಗಂಟೆಗೆ ಮೌ||.ರವೂಫ್ ಹುದವಿಯವರ ನೇತೃತ್ವದಲ್ಲಿ, ಖಾಸಗಿ ಬಸ್ ನಿಲ್ದಾಣದ ಶಾದುಲಿ ಜುಮಾ ಮಸೀದಿಯಲ್ಲಿ, ಮೌ||. ಅಬ್ದುಲ್ಲಾ ಉಸ್ತಾದ್ ನೇತೃತ್ವದಲ್ಲಿ ಬೆಳಿಗ್ಗೆ ೯ ಗಂಟೆಗೆ, ಬಂಗಾಳೀ ಬೀದಿಯ ಮಸ್ಜಿದ್-ಎ-ಅಝಂನಲ್ಲಿ ಮೌ||.ಹಸೀಬ್ ಶರೀಫ್‌ರವರ ನೇತೃತ್ವದಲ್ಲಿ ೯:೩೦ಗಂಟೆಗೆ, ಸುಣ್ಣದಬೀದಿಯ ಮದೀನಾ ಮಸೀದಿಯಲ್ಲಿ ಮೌ||. ಮುಝಮ್ಮಿಲ್ ರವರ ನೇತೃತ್ವದಲ್ಲಿ ಬೆಳಿಗ್ಗೆ ೯:೩೦ ಗಂಟೆಗೆ, ಕ್ಲಾಕ್ ಟವರ್ ಹತ್ತಿರದ ನವಾಯತಿ ಮುರುಡೇಶ್ವರ್ ಜಮಾಅತ್ ಮಸೀದಿಯಲ್ಲಿ ಬೆಳಿಗ್ಗೆ ೮:೦೦ ಗಂಟೆಗೆ ಮೌ||.ಮಖ್ಸೂದ್ ಅಹಮದ್ ರವರ ನೇತೃತ್ವದಲ್ಲಿ, ಅಪ್ಪಯ್ಯಸ್ವಾಮಿ ರಸ್ತೆಯ ಜಾಮಿಯಾ ಮಸೀದಿಯಲ್ಲಿ ಮೌ||.ಗುಲ್‌ಶದ್ ಅಹಮದ್ ನೇತೃತ್ವದಲ್ಲಿ ಬೆಳಿಗ್ಗೆ ೯:೩೦ಗಂಟೆಗೆ, ಕಲ್ಲುಬಾಣೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಹನೀಫ್ ಫೈಝಿಯವರ ನೇತೃತ್ವದಲ್ಲಿ ಬೆಳಿಗ್ಗೆ ೮:೩೦ ಗಂಟೆಗೆ ನಮಾಝ್ ನಡೆಯಲಿದೆ.

ವೀರಾಜಪೇಟೆ ಗೋಣಿಕೊಪ್ಪ ರಸ್ತೆಯ ಬ್ರೆöÊಟ್ ಕ್ಯಾಂಪಸ್ ಈದ್‌ಗಾಹ್ ನಲ್ಲಿ ಬೆಳಿಗ್ಗೆ ೭:೩೦ಗಂಟೆಗೆ ಮೌ||.ಸಿ.ಅಲಿ ಸಾಬ್ ಹಾಗೂ ಮಲಬಾರ್ ರಸ್ತೆಯ ಸಲಫಿ ಜುಮಾ ಮಸೀದಿಯ ಈದ್‌ಗಾಹ್ ನಲ್ಲಿ ಅಬ್ದುಲ್‌ರೆಹ್ಮಾನ್ ಮುಸ್ಲಿಯಾರ್ ಸುಳ್ಯ ರವರ ನೇತೃತ್ವದಲ್ಲಿ ಬೆಳಿಗ್ಗೆ ೭:೩೦ ಗಂಟೆಗೆ ನಮಾಝ್ ಹಾಗೂ ಪ್ರವಚನ ನಡೆಯಲಿದೆ. ಈ ಈದ್‌ಗಾಹ್‌ಗಳಲ್ಲಿ ಮಹಿಳೆಯರಿಗೂ ಪ್ರವಚನ ಹಾಗೂ ನಮಾಝ್‌ಗೆ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗಿದೆ.