ಮಡಿಕೇರಿ, ಮೇ ೨: ಇಲ್ಲಿಗೆ ಸನಿಹದ ಮಕ್ಕಂದೂರು ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿಯಾಗಿ ಕಳೆದ ೩೮ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿದ ಬಿ.ಕೆ. ಜತ್ತಪ್ಪ ಅವರಿಗೆ ಪಂಚಾಯಿತಿ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

ಪಂಚಾಯಿತಿ ಅಧ್ಯಕ್ಷ ಕನ್ನಿಕಂಡ ಶ್ಯಾಂ ಸುಬ್ಬಯ್ಯ, ಉಪಾಧ್ಯಕ್ಷೆ ಪಡೇಟ್ಟಿರ ಕವಿತಾ, ಸದಸ್ಯರುಗಳಾದ ಕಟ್ಟೆಮನೆ ಗಣೇಶ್, ಬಿ.ಎನ್. ರಮೇಶ್ ಸುವರ್ಣ, ಬಿ.ಎಸ್. ವಿಮಲ ರವಿ, ಬಿ.ಎಸ್. ಸುನಂದ, ಅಭಿವೃದ್ಧಿ ಅಧಿಕಾರಿ ಎಸ್.ಎಸ್. ದಿನೇಶ್, ಸಿಬ್ಬಂದಿಗಳಾದ ವನಿತಾ ನಾಗೇಶ್, ರಮ್ಯ ಗಣೇಶ್, ಗೀತಾ, ಚಂದ್ರಶೇಖರ್ ಇತರರು ಸನ್ಮಾನಿಸಿ ಬೀಳ್ಕೊಟ್ಟರು.