ವಿಶೇಷ ವರದಿ :ಪುತ್ತರಿರ ಕರುಣ್ ಕಾಳಯ್ಯ ಚೆಟ್ಟಳ್ಳಿ, ಮೇ ೨: ೧೯೭೫-೭೬ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮತ್ತು ಸೆರೆವಾಸ ಅನುಭವಿಸಿದವರಿಗೆ ಪಿಂಚಣಿ ಮಂಜೂರು ಮಾಡಲು ಸರಕಾರ ಮಾಹಿತಿ ಕೇಳಿತ್ತು. ಜಿಲ್ಲಾಧಿಕಾರಿ ಕಚೇರಿಯಿಂದ ಸರಕಾರಕ್ಕೆ ಸಲ್ಲಿಸಿದ ಬಗ್ಗೆ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದರೂ ಜಿಲ್ಲಾಧಿಕಾರಿ ಕಚೇರಿಯಿಂದ ಈವರೆಗೂ ಮಾಹಿತಿ ನೀಡಿಲ್ಲ.

ಭಾರತದ ಆಗಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾಗಾAಧಿಯವರು ಸಂವಿಧಾನದ ೩೫೨(೧)ನೇ ಅಧಿನಿಯಮದಂತೆ ದೇಶಾದ್ಯಂತ ಆಂತರಿಕ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದರು. ಇದರ ಪರಿಣಾಮವಾಗಿ ೧೯೭೫ ಜೂನ್ ೨೩ ರಿಂದ ೧೯೭೭ ಮಾರ್ಚ್ ೨೧ರವರೆಗೆ ೨೧ ತಿಂಗಳಕಾಲ ತುರ್ತುಪರಿಸ್ಥಿತಿ ಮುಂದುವರಿಯಿತು. ಆ ಸಂದರ್ಭ ಇಂದಿರಾಗಾAಧಿ ಯವರ ಆಡಳಿತದ ವಿರುದ್ಧ ಹಾಗೂ ಸರಕಾರದ ವಿರುದ್ಧ ದೇಶಾದÀ್ಯಂತ ಜನ ದಂಗೆ ಎದ್ದರು. ಆ ಸಂದರ್ಭದಲ್ಲಿ ಸರಕಾರದ ವಿರುದ್ಧ ಹೋರಾಟ ಮಾಡಿದ ಹಲವು ವಿಪಕ್ಷದ ನಾಯಕರನ್ನು, ಜೊತೆಗೆ ಹೋರಾಟದ ಮುಂಚೂಣಿಯಲ್ಲಿದ್ದ ಸಾವಿರಾರು ಆರ್‌ಎಸ್‌ಎಸ್ ಹೋರಾಟಗಾರರನ್ನೆಲ್ಲ ಬಂಧಿಸಿ ಸೆರೆ ವಾಸದಲ್ಲಿಡ ಲಾಯಿತು.

ಆಗಿನ ತುರ್ತು ಪರಿಸ್ಥಿತಿಯ ವೇಳೆ ಒಂದು ತಿಂಗಳಿಗಿAತ ಹೆಚ್ಚುಕಾಲ ಜೈಲು ಶಿಕ್ಷೆ ಅನುಭವಿಸಿದವರಿಗೆ ರೂ. ೧೦೦೦೦, ಒಂದು ತಿಂಗಳಿಗಿAತ ಕಡಿಮೆ ಜೈಲು ಶಿಕ್ಷೆ ಅನುಭವಿಸಿದವರಿಗೆ ರೂ. ೫೦೦೦ ಮಾಸಿಕ ಪಿಂಚಣಿ ನೀಡಲು ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಮಹಾರಾಷ್ಟçದಂತ ಬಿಜೆಪಿ ಆಡಳಿತದ ರಾಜ್ಯಗಳು ನಿರ್ಧರಿಸಿದವು.

(ಮೊದಲ ಪುಟದಿಂದ) ೨೪.೦೬.೨೦೨೧ರಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಕಾರಿಗಳಿಗೆ ಸುತ್ತೋಲೆ ಯನ್ನು ಹೊರಡಿಸಿ ಆಯಾಯ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮತ್ತು ಸೆರೆವಾಸ ಅನುಭವಿಸಿದವರ ಮಾಹಿತಿಯನ್ನು ಒಂದುವಾರದೊಳಗೆ ನೀಡಲು ಸರಕಾರ ಕೋರಿತು.

ಅದೇ ರೀತಿ ತುರ್ತು ಪರಿಸ್ಥಿತಿಯ ವೇಳೆ ಕೊಡಗಿನಲ್ಲಿ ಸೆರೆವಾಸ ಅನುಭವಿಸಿದವರ ಪ್ರಚಾರಪಡಿಸಲು ರೇಡಿಯೋ ಹಾಗೂ ಪತ್ರಿಕೆಗಳ ಮೂಲಕ ಮಾಹಿತಿ ನೀಡಲು ಕೋರಲಾಗಿತ್ತು. ಕೊಡಗಿನಲ್ಲಿ ಆಗಿನ ಕಾಲದಲ್ಲಿ ಮಡಿಕೇರಿ, ಮೈಸೂರು ಹಾಗೂ ಬೆಂಗಳೂರಿನ ಕಾರಾಗೃಹದಲ್ಲಿ ಜೈಲುಶಿಕ್ಷೆ ಅನುಭವಿಸಿದವರಲ್ಲಿ ಸುಮಾರು ಶೇ. ೯೦ ಭಾಗ ಜನ ಮರಣಪಟ್ಟಿದ್ದು, ಬೆರಳೆಣಿಕೆಯಷ್ಟು ಜನ ಮಾತ್ರ ಉಳಿದಿದ್ದಾರೆ. ಹೋರಾಟದಲ್ಲಿ ಭಾಗವಹಿಸಿದವರ ಹಾಗೂ ಬದುಕಿಲ್ಲದವರ ಕುಟುಂಬಗಳ ಮಾಹಿತಿ ಯನ್ನೊಳಗೊಂಡ ೧೦೦ ರಿಂದ ೧೫೦ ಮೇಲ್ಪಟ್ಟು ಅರ್ಜಿಗಳು ಸಲ್ಲಿಕೆಯಾಗಿದೆ ಎನ್ನುತ್ತಾರೆ ತುರ್ತು ಪರಿಸ್ಥಿತಿಯಲ್ಲಿ ಭಾಗವಹಿಸಿದಂತ ಮುದ್ದಂಡ ದೇವಯ್ಯನವರು ಹೇಳುತ್ತಾರೆ.

ಕರ್ನಾಟಕ ಮಾಹಿತಿ ಹಕ್ಕು ಅಧಿನಿಯಮ ೨೦೦೫ರ ಮಾಹಿತಿ ಹಕ್ಕಿನಡಿ ೨೦೨೧ರಿಂದ ೨೦೨೨ವರೆಗೆ ಪಿಂಚಣಿದಾರರ ಬಗ್ಗೆ ಸರಕಾರಕ್ಕೆ ಸಲ್ಲಿಸಿದ ಮಾಹಿತಿ ನೀಡುವಂತೆ ೦೯.೦೩.೨೦೨೨ರಂದು ಜಿಲ್ಲಾಧಿಕಾರಿ ಗಳಿಗೆ ಪಿ.ಪಿ. ಕಾಳಯ್ಯನವರ ಹೆಸರಿನಲ್ಲಿ ಅರ್ಜಿಸಲ್ಲಿಸಿ ೪೦ ದಿನಗಳು ಕಳೆದರೂ ಇನ್ನು ಮಾಹಿತಿ ನೀಡದೆಯೇ ನಿ¯ðಕ್ಷ ವಹಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಿ ಸಂಬAಧಪಟ್ಟ ವಿಭಾಗದಲ್ಲಿ ಮಾಹಿತಿ ಕೋರಿದಾಗ ಇನ್ನೂ ಕೆಲವು ಅರ್ಜಿಗಳು ಕಡತದಲ್ಲಿ ಉಳಿದಿವೆ; ಅವನ್ನು ಸರಕಾರಕ್ಕೆ ಸಲ್ಲಿಸಿದ ನಂತರ ಮಾಹಿತಿ ನೀಡುತ್ತೇವೆ ಎನ್ನುತ್ತಾರೆ. ಜಿಲ್ಲಾಧಿಕಾರಿ ಕಚೇರಿಯಿಂದಲೇ ಸಲ್ಲಿಸಿದ ಅರ್ಜಿಯ ಮಾಹಿತಿ ಹಕ್ಕಿನ ಸಮಯ ಮೀರಿಯೂ ಸಲ್ಲಿಸಿದ ಮಾಹಿತಿಯನ್ನು ಪಡೆಯಲು ಇನ್ನೂ ಕಾಯುವಂತಾಗಿದೆ.