ಪೊನ್ನಂಪೇಟೆ, ಮೇ ೨ : ಪಾದಚಾರಿಯೊಬ್ಬರಿಗೆ ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವಿಗೀಡಾಗಿರುವ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ತಾವಳಗೇರಿ ಗ್ರಾಮದ ಮಾಚಯ್ಯ ಎಂಬವರ ಲೈನ್ ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕ ಕರಿಯ (೭೦) ಎಂಬವರೇ ಮೃತ ದುರ್ದೈವಿ.

ತಾವಳಗೇರಿಯಿಂದ ಟಿ.ಶೆಟ್ಟಿಗೇರಿಗೆ ತೆರಳಿ ದಿನಸಿ ಸಾಮಾಗ್ರಿಗಳನ್ನು ಖರೀದಿಸಿ ಮನೆಗೆ ವಾಪಾಸಾಗುತಿದ್ದ ಸಂದÀರ್ಭ ಟಿ.ಶೆಟ್ಟಿಗೇರಿ - ಒಂಟಿಅAಗಡಿ ನಡುವೆ ಟಿ.ಶೆಟ್ಟಿಗೇರಿಯ ಪರ್ಮಾಲೆ ಗಣೇಶ್ ಎಂಬವರ ಅಶೋಕ ಲೈಲ್ಯಾಂಡ್ ಗೂಡ್ಸ್ ಆಟೋ (ಕೆ.ಎ.೧೨, ಬಿ.೮೫೦೦) ಡಿಕ್ಕಿಹೊಡೆದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಘಟನೆ ನಡೆದ ಸ್ಥಳಕ್ಕೆ ವೀರಾಜಪೇಟೆ ತಾಲೂಕು ಡಿವೈಎಸ್‌ಪಿ ನಿರಂಜನ್ ರಾಜೇ ಅರಸ್, ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ, ಶ್ರೀಮಂಗಲ ಠಾಣಾಧಿಕಾರಿ ರವಿಶಂಕರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಡಿಕ್ಕಿ ಪಡಿಸಿದ ಗೂಡ್ಸ್ ಆಟೋ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕುಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಮೃತನ ಕುಟುಂಬಸ್ಥರಿಗೆ ಒಪ್ಪಿಸಲಾಯಿತು.