ಶನಿವಾರಸAತೆ, ಮೇ ೨: ಪಟ್ಟಣದ ನಿವೃತ್ತ ಸೈನಿಕರ ಸಂಘದ ವತಿಯಿಂದ ಮಾಜಿ ಸೈನಿಕ ದಿವಂಗತ ಸುಬೇದಾರ್ ಎಂ.ಎನ್.ಧರ್ಮಪ್ಪ ಅವರ ಸಂಸ್ಮರಣೆ- ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ವರ್ಷದ ನೆನಪು ಕಾರ್ಯಕ್ರಮ ತಾ ೩ರಂದು (ಇಂದು) ಬೆಳಿಗ್ಗೆ ೧೦.೩೦ಕ್ಕೆ ಚಿನ್ನಳ್ಳಿ ರಸ್ತೆಯ ಖಾಸಗಿ ರೆಸಾರ್ಟ್ನಲ್ಲಿ ನಡೆಯಲಿದೆ.

ತಪೋವನ ಮನೆಹಳ್ಳಿ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ ದೀಪ ಬೆಳಗಿಸಿ ದಿವಂಗತ ಸುಬೇದಾರ್ ಎಂ.ಎನ್.ಧರ್ಮಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ. ಮಹಾಂತ ಶಿವಲಿಂಗ ಸ್ವಾಮೀಜಿ, ನಿವೃತ್ತ ಸಂಘದ ಅಧ್ಯಕ್ಷ ಎ.ಎಸ್. ಮಹೇಶ್, ಮಡಿಕೇರಿ ಕೆ.ಎಸ್.ಪಿ. ಅಧ್ಯಕ್ಷ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ, ಉಪಾಧ್ಯಕ್ಷ ಕರ್ನಲ್ ಎಂ.ಎ. ಚಿನ್ನಪ್ಪ, ಕಾರ್ಯದರ್ಶಿ ಮೇಜರ್ ಸಿ.ಎಚ್. ಚಂಗಪ್ಪ ಹಾಗೂ ಸಕಲೇಶಪುರ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಟಿ.ಪಿ. ಕೃಷ್ಣಪ್ಪ ಅವರು ನುಡಿನಮನ ಸಲ್ಲಿಸಲಿದ್ದಾರೆ.

ಈ ಸಂದರ್ಭ ಮಾಜಿ ಸೈನಿಕ ದಿವಂಗತ ಧರ್ಮಪ್ಪ ಅವರ ಪತ್ನಿ ಶಾರದಾ ಧರ್ಮಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಿದೆ.