ಗೋಣಿಕೊಪ್ಪಲು, ಏ. ೩೦ : ಕಳೆದೆರಡು ತಿಂಗಳಿನಿAದ ಕೊಡಗಿನ ವಿವಿಧ ಭಾಗದಲ್ಲಿ ಅರಣ್ಯದಿಂದ ಬಂದಿರುವ ಹುಲಿಗಳು ಕಾಫಿ ತೋಟದಲ್ಲಿ ವಾಸ್ತವ್ಯ ಕಂಡುಕೊAಡಿರುವುದರಿAದ ತೋಟದ ಮಾಲೀಕರಿಗೆ ಹಾಗೂ ಕಾರ್ಮಿಕರಿಗೆ ನೆಮ್ಮದಿ ಇಲ್ಲದಂತಾಗಿದೆ. ಪ್ರತಿನಿತ್ಯ ತೋಟಕ್ಕೆ ಭಯದ ವಾತಾವರಣದಲ್ಲಿಯೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹುಲಿಯ ಭಯದಿಂದ ತೋಟ ಕಾರ್ಮಿಕರು ಕೆಲಸಕ್ಕೆ ಸಕಾಲದಲ್ಲಿ ಆಗಮಿಸದೆ ಇರುವುದರಿಂದ ಸಹಜವಾಗಿಯೇ ತೋಟದ ಮಾಲೀಕರಿಗೆ ತೋಟದ ನಿರ್ವಹಣೆಯೇ ದೊಡ್ಡ ಸಮಸ್ಯೆಯಾಗಿದೆ. ಹುಲಿ ಅಲ್ಲದೆ ಅರಣ್ಯ ಪ್ರದೇಶದಿಂದ ಕಾಡಾನೆಗಳು, ಕರಡಿ ಸೇರಿದಂತೆ ಇನ್ನಿತರ ಪ್ರಾಣಿಗಳ ಉಪಟಳದಿಂದ ಕಾಫಿ ಬೆಳೆಗಾರ ಹೈರಾಣಾಗಿದ್ದಾನೆ.
ದ.ಕೊಡಗಿನ ಬಹುತೇಕ ಕಾಫಿ ತೋಟಗಳಲ್ಲಿ ಕೆಲಸ ನಿರ್ವಹಿಸಲು ಹೊರ ಜಿಲ್ಲೆಗಳಿಂದ ಆಗಮಿಸುವ ಕಾರ್ಮಿಕರನ್ನು ಹೆಚ್ಚಾಗಿ ಇಲ್ಲಿನ ಕಾಫಿ ಬೆಳೆಗಾರರು, ಮಾಲೀಕರು ಅವಲಂಭಿತರಾಗಿದ್ದಾರೆ. ಹೆಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ಸೇರಿದಂತೆ ಹಲವು ಭಾಗದಿಂದ ಕೂಲಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಆಗಮಿಸಿ ರೈತರ ವಿವಿಧ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಹುತೇಕ ಕಾರ್ಮಿಕರು ವರ್ಷದ ವಿಶೇಷ ಹಬ್ಬದಂದು ತಮ್ಮ ಊರಿಗೆ ತೆರಳಿ ನಂತರ ಮತ್ತೆ ಇಲ್ಲಿನ ತೋಟಕ್ಕೆ ಆಗಮಿಸಿ ತಮ್ಮ ದೈನಂದಿನ ಕೆಲಸ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಪ್ರತಿನಿತ್ಯ ಗಡಿಭಾಗ ಆನೆ ಚೌಕೂರು ಸಮೀಪದ ಅಳ್ಳೂರು,ಪಂಚವಳ್ಳಿ ಮುದ್ದೇನಹಳ್ಳಿ ಪಿರಿಯಾಪಟ್ಟಣ ಮಾಲ್ದಾರೆ ಹಾಗೂ ಇತರೆ ಊರುಗಳಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಜೀಪಿನಲ್ಲಿ ಆಗಮಿಸಿ ಇಲ್ಲಿನ ತೋಟ ಕೆಲಸದಲ್ಲಿ ತೊಡಗುತ್ತಾರೆ. ಸಂಜೆ ಮತ್ತೆ ತಮ್ಮ ಊರುಗಳತ್ತ ಪ್ರಯಾಣ ಬೆಳೆಸುತ್ತಾರೆ.
ಇದೀಗ ದ.ಕೊಡಗಿನ ಹುದಿಕೇರಿ, ಬೇಗೂರು, ಕುಂದ ಈಚೂರು, ಬಿಟ್ಟಂಗಾಲ, ಬಿ.ಶೆಟ್ಟಿಗೇರಿ, ಕೊಂಗಣ, ಹಾಗೂ ಹಾತೂರು, ಬೈಗೋಡು ಮುಂತಾದ ಭಾಗದಲ್ಲಿ ಬ್ರಹ್ಮಗಿರಿ ವನ್ಯಜೀವಿ ವಿಭಾಗದಿಂದ ಆಗಮಿಸಿರುವ ಕೆಲವು ಹುಲಿಗಳು ಬೆಳೆಗಾರರ ಕಾಫಿ ತೋಟದಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಹಾಗೂ ತೋಟದಲ್ಲಿಯೇ ವಾಸ್ತವ್ಯ ಹೂಡುತ್ತಿರುವುದರಿಂದ ಭಯಗೊಂಡ ಕಾರ್ಮಿಕರು ತಮ್ಮ ದೈನಂದಿನ ಕೆಲಸಕ್ಕೆ ಕಾಫಿ ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಪ್ರಮುಖವಾಗಿ ಕಾಫಿ ಹಾಗೂ ಕರಿಮೆಣಸು ಕುಯ್ಯುವ ವೇಳೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತೋಟಕ್ಕೆ ಆಗಮಿಸಲೆ ಬೇಕಾಗಿದೆ. ಒಂದು ವೇಳೆ ಕಾರ್ಮಿಕರು ಇಂತಹ ಸಂದರ್ಭದಲ್ಲಿ ತೋಟಕ್ಕೆ ತೆರಳುವುದಕ್ಕೆ ಹಿಂದೇಟು ಹಾಕಿದ್ದಲ್ಲಿ ತೋಟದ ಮಾಲೀಕನಿಗೆ ಇದರ ನೇರ ಪರಿಣಾಮ ಬೀರಲಿದೆ. ತೋಟದಲ್ಲಿ ಖಾಯಂ ಆಗಿರುವ ಪರಿಶಿಷ್ಟ ವರ್ಗದ ಕೂಲಿ ಕಾರ್ಮಿಕರಿಗೆ ದೊಡ್ಡ ಪ್ರಮಾಣದಲ್ಲಿರುವ ಕಾಫಿ ಹಾಗೂ ಮೆಣಸನ್ನು ಕುಯ್ಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಹೊರಗಿನಿಂದ ಬರುವ ಕಾರ್ಮಿಕನ ಮೇಲೆಯೇ ತೋಟ ಮಾಲೀಕ ಅವಲಂಭಿತರಾಗಿದ್ದಾರೆ.
ಕಳೆದ ಒಂದು ತಿಂಗಳಿನಿAದ ದ.ಕೊಡಗಿನ ವಿವಿಧ ಭಾಗದಲ್ಲಿ ೫ಕ್ಕೂ ಅಧಿಕ ಹುಲಿಗಳು ರೈತರ ಕಾಫಿ ತೋಟದಲ್ಲಿ ಕಾರ್ಮಿಕರಿಗೆ ಎದುರಾಗಿವೆ. ಇದರಿಂದ ಕಾರ್ಮಿಕರು ಭಯಗೊಂಡಿದ್ದಾರೆ. ಮಾ. ೨೮ರಂದು ಬಿಟ್ಟಂಗಾಲ ಸಮೀಪದ ೧ನೇ ರುದ್ರಗುಪ್ಪೆಯಲ್ಲಿ ಕಾರ್ಮಿಕ ಗಣೇಶ್ನನ್ನು ಹುಲಿಯು ದಾಳಿ ನಡೆಸಿ ಕೊಂದು ಹಾಕಿದ ನಂತರ ಸಹಜವಾಗಿಯೇ ಕಾರ್ಮಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಕಾಫಿ ಹಾಗೂ ಕರಿಮೆಣಸು ಕೊಯ್ಲು ಆದ ನಂತರ ಇದೀಗ ಅವಶ್ಯವಾಗಿ ಮರದ ರೆಂಬೆಗಳು ಹಾಗೂ ಕಾಫಿಯ ಚಿಗುರನ್ನು
(ಮೊದಲ ಪುಟದಿಂದ) ತೆಗೆಯಲೇಬೇಕಾದ ಅನಿವಾರ್ಯ ಪರಿಸ್ಥಿತಿ ಇರುವುದರಿಂದ ಕಾರ್ಮಿಕರು ಈ ಕೆಲಸ ನಿರ್ವಹಿಸಲು ಪ್ರತಿನಿತ್ಯ ತೋಟಗಳಿಗೆ ತೆರಳಲೇಬೇಕಾಗಿದೆ. ಮಳೆಯು ಆಗಿಂದ್ದಾಗಿಯೇ ಕಾಣಿಸಿಕೊಳ್ಳುತ್ತಿರುವುದರಿಂದ ಕಾಫಿ ತೋಟಕ್ಕೆ ಕೆಲವೇ ದಿನಗಳಲ್ಲಿ ಗಿಡಗಳಿಗೆ ಗೊಬ್ಬರವನ್ನು ಹಾಕಬೇಕಾಗಿದೆ. ಆದರೆ ಸುತ್ತಮುತ್ತಲಿನಲ್ಲಿ ಹುಲಿಯ ಸಂಚಾರದ ಹೆಜ್ಜೆ ಗುರುತುಗಳು ಕಾರ್ಮಿಕರಿಗೆ ಕಾಣಿಸಿಕೊಳ್ಳುತ್ತಿರುವುದರಿಂದ ತೋಟಗಳಿಗೆ ತೆರಳಲು ಕಾರ್ಮಿಕರು ಮನಸ್ಸು ಮಾಡುತ್ತಿಲ್ಲ.
ಹಾತೂರು,ಬೈಗೋಡು,ಕಳತ್ಮಾಡು ಭಾಗದಲ್ಲಿರುವ ರೈತರ ತೋಟಗಳಲ್ಲಿ ಹುಲಿಯು ಕಾಣಿಸಿಕೊಂಡ ಮಾಹಿತಿ ಲಭ್ಯವಾದ ದಿನದಂದು ಅಲ್ಲಿಂದ ತೋಟದ ಕಾರ್ಮಿಕರಿಗೆ ಮುಂಜಾಗ್ರತಾ ಕ್ರಮವಾಗಿ ತೋಟಗಳಿಗೆ ತೆರಳದಂತೆ ರಜೆ ಘೋಷಣೆ ಮಾಡಲಾಗುತ್ತಿದೆ. ಇದರಿಂದ ಕಾರ್ಮಿಕರಿಗೆ ಸಹಜವಾಗಿಯೇ ನಷ್ಟ ಸಂಭವಿಸುತ್ತಿದೆ. ಬಹುತೇಕ ಕಾಫಿ ತೋಟದ ಮಾಲೀಕರು ತಮ್ಮ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವವರನ್ನು ಗುಂಪುಗುAಪಾಗಿ ತೋಟಕ್ಕೆ ತೆರಳಲು ಸೂಚನೆ ನೀಡಿದ್ದಾರೆ. ಆದರೆ ಹುಲಿಯು ಯಾವ ಭಾಗದಲ್ಲಿ ಅಡಗಿದೆ ಎಂಬ ಸಂಶಯ ಕಾರ್ಮಿಕರನ್ನು ಸದಾ ಕಾಡುತ್ತಿರುವುದರಿಂದ ನೆಮ್ಮದಿಯಿಂದ ತೋಟದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಹಳ್ಳಿ ಪ್ರದೇಶದಿಂದ ಆಗಮಿಸಿರುವ ನೂರಾರು ಕಾರ್ಮಿಕರು ಮತ್ತೆ ತಮ್ಮ ಊರಿನತ್ತ ತೆರಳುವುದಾಗಿ ತೋಟದ ಮಾಲೀಕರಿಗೆ ದುಂಬಾಲು ಬೀಳುತ್ತಿದ್ದಾರೆ. ಕಾರ್ಮಿಕರು ತೋಟದಿಂದ ತೆರಳಿದರೆ, ಮತ್ತೆ ಕಾರ್ಮಿಕರನ್ನು ಕರೆ ತರುವುದು ಸಾಧ್ಯವಾಗುತ್ತಿಲ್ಲ. ಇದರಿಂದ ಬೆಳೆಗಾರರು ಸಹಜವಾಗಿಯೇ ನಷ್ಟ ಅನುಭವಿಸುವಂತಾಗಿದೆ.ಅಸ್ಸಾA ಕಾರ್ಮಿಕರು
ಕೊಡಗಿನ ಸುತ್ತಮುತ್ತಲಿನ ಕಾಫಿ ತೋಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರಾಗಿ ದೂರದ ಅಸ್ಸಾಂನಿAದ ಆಗಮಿಸಿದ್ದ ಕಾರ್ಮಿಕರು ಕಾಫಿ ಕುಯ್ಲಿನ ನಂತರ ತಮ್ಮ ಊರುಗಳಿಗೆ ತೆರಳಿದ್ದಾರೆ. ಆದ್ದರಿಂದ ಇಲ್ಲಿರುವ ಕಾರ್ಮಿಕರನ್ನೇ ಇಲ್ಲಿನ ಕಾಫಿ ತೋಟದ ಮಾಲೀಕರು ಅವಲಂಭಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಕಾಫಿ ತೋಟವನ್ನೇ ನಂಬಿರುವ ಮಾಲೀಕರಿಗೆ ಇದೀಗ ಹುಲಿಯ ಸಂಚಾರದಿAದ ನೆಮ್ಮದಿ ಕಳೆದುಕೊಳ್ಳುವಂತಾಗಿದೆ.ತೋಟ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಭದ್ರತೆ ನೀಡುವುದೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.
- ವಿಶೇಷ ವರದಿ : ಹೆಚ್.ಕೆ. ಜಗದೀಶ್