ವೀರಾಜಪೇಟೆ, ಮೇ ೨: ನಗರದ ಆದಿ ದೇವತೆಯಾದ ತೆಲುಗರ ಬೀದಿಯ ಶ್ರೀ ಮಾರಿಯಮ್ಮ ದೇವಾಲಯದ ವಾರ್ಷಿಕ ಕರಗ ಆರಾಧನೆಯು ತಾ. ೩ ರಿಂದ (ಇಂದಿನಿAದ) ಆರಂಭವಾಗಲಿದೆ.
ವೀರಾಜಪೇಟೆ ನಗರದ ರಾಜಬೀದಿಯಾದ ತೆಲುಗು ಶೆಟ್ಟರ ಬೀದಿಯ ವಾರ್ಷಿಕ ಕರಗ ಮಹೋತ್ಸವವು ತಾ. ೩ ರಿಂದ ಆರಂಭವಾಗಿ ತಾ. ೭ ರಂದು ಅಂತ್ಯವಾಗಲಿದೆ. ತಾ. ೩ ಮಂಗಳವಾರ ದಿನದಂದು ದೇವಿಯ ಕರಗ ಆರಾಧನೆ ಮತ್ತು ದೇಗುಲದಲ್ಲಿ ರಾತ್ರಿ ಮಹಾಪೂಜೆ ಪ್ರಸಾದ ವಿನಿಯೋಗ ನಡೆಯಲಿದೆ. ತಾ ೪ ರಂದು ದೇವಿಗೆ ಸಂಜೆ ೭ ಗಂಟೆಗೆ ತಂಬಿಟ್ಟು ಆರತಿ, ಪ್ರಸಾದ ವಿನಿಯೋಗ, ತಾ. ೫ ರಂದು ದೇವಿಗೆ ವಿಶೇಷ ಅಲಂಕಾರ ಪೂಜೆ, ಮಹಾಪೂಜೆ ಮಧ್ಯಾಹ್ನ ೨ ಗಂಟೆಗೆ ಪ್ರಸಾದ ವಿನಿಯೋಗ, ತಾ. ೬ ರಂದು ದೇವಿಗೆ ಮಹಾಪೂಜೆ ಮತ್ತು ರಾತ್ರಿ ಅನ್ನಸಂಪತರ್ಪಣೆ ನಡೆಯಲಿದೆ. ತಾ. ೭ ಸಂಜೆ ದೇವಿಯ ಕರಗವು ನಗರದ ತೆಲುಗರ ಬೀದಿಯಿಂದ ಹೊರಟು ನಗರ ಪ್ರದಕ್ಷಿಣೆ ಮುಖ್ಯ ರಸ್ತೆ, ಜೈನರ ಬೀದಿ, ದೇವಾಂಗ ಬೀದಿ, ದಖ್ಖನಿ ಮೊಹಲ್ಲ, ತೆಲುಗರ ಬೀದಿ ಮೂಲಕ ದೇವಾಲಯಕ್ಕೆ ಆಗಮಿಸುವುದು ಎಂದು ದೇಗುಲದ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದೆ.