ಸಾಮಾನ್ಯವಾಗಿ ದೈಹಿಕ ಹಾಗೂ ಬೌದ್ಧಿಕ ಶ್ರಮವನ್ನು ವ್ಯಯಿಸಿ ಹಣಗಳಿಸುವ ವ್ಯಕ್ತಿಗೆ ಕಾರ್ಮಿಕ ಎನ್ನುತ್ತೇವೆ. ಮೇ ೧ ರಂದು ಆಚರಿಸುವ ಅಂರ‍್ರಾಷ್ಟಿçÃಯ ಕಾರ್ಮಿಕರ ದಿನವನ್ನು ‘ಲೇಬರ್ ಡೇ’ ಅಥವಾ ‘ವರ್ಕರ್ಸ್ ಡೇ’ ಎಂದೂ ಕರೆಯಲಾಗುತ್ತದೆ. ಈ ದಿನವನ್ನು ಕಾರ್ಮಿಕ ಪ್ರಭುತ್ವದ ಶುಭ ಯುಗದ ಉದಯದ ಕುರುಹಾಗಿ ಮೇ ೧ ರಂದು ಆಚರಣೆ ಮಾಡಬೇಕೆಂದು ರಾಬರ್ಡ್ ಓವೆನ್ ಸೂಚಿಸಿದ್ದರು. ೨೦ನೇ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ - ಕಾರ್ಮಿಕ ಸಂಘ ಚಳುವಳಿಯ ಪ್ರಭಾವ ಹೆಚ್ಚಿದಾಗಿನಿಂದ ಕಾರ್ಮಿಕರ ದಿನಾಚರಣೆ ಆರಂಭವಾಯಿತು. ಮೊದಲ ಬಾರಿಗೆ ಭಾರತದಲ್ಲಿ ಕಾರ್ಮಿಕ ದಿನವನ್ನು ‘ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್’. ೧೯೨೩ರ ಮೇ ೧ ರಂದು ಚೆನ್ನೆöÊನಲ್ಲಿ ‘ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್’ ಅಡಿಯಲ್ಲಿ ಆಚರಿಸಲಾಯಿತು. ಆ ಸಮಯದಲ್ಲಿ ಕಾರ್ಮಿಕರ ದಿನವನ್ನು ‘ಮದ್ರಾಸ್ ಡೆ’ ಎಂದು ಕರೆಯಲಾಗುತ್ತಿತ್ತು. ಭಾರತದಲ್ಲಿ ‘ಅಂರ‍್ರಾಷ್ಟಿçÃಯ ಶ್ರಮಿಕ್ ದಿವಸ್’ ಎಂದು ಆಚರಿಸಲಾಗುತ್ತದೆ. ಬೆವರು ಸುರಿಸಿ ಕೆಲಸವನ್ನು ಮಾಡಿದವರಿಗೆ ಶ್ರಮದ ಅರ್ಥ, ಮಹತ್ವ ತಿಳಿಯುವುದು. ದೇಶದ ಆರ್ಥಿಕ ಅಭಿವೃದ್ಧಿಯು ಆ ದೇಶದ ಕಾರ್ಮಿಕರ ಮೇಲೆ ಅವಲಂಬಿಸಿರುತ್ತದೆ. ಕಾರ್ಮಿಕರ ವರ್ಗದಿಂದ ದೇಶವು ಆರ್ಥಿಕ ಪ್ರಗತಿಯನ್ನು ಕಾಣುತ್ತದೆ. ಕಾರ್ಮಿಕರು ಪ್ರತಿ ಕೆಲಸದ ಯಶಸ್ಸಿನ ಅವಿಭಾಜ್ಯ ಅಂಗವಾಗಿರುತ್ತಾರೆ. ತಮ್ಮ ಜೀವವನ್ನು ಮುಡಿಪಾಗಿರಿಸಿ ರಾಷ್ಟçದ ಗಡಿ ಕಾಯುತ್ತಿರುವ ಯೋಧರು ಮತ್ತು ರೈತರ ಗೌರವ ಪ್ರತಿಷ್ಠೆಗಳನ್ನು ‘ಜೈ ಜವಾನ, ಜೈ ಕಿಸಾನ್’ ಘೋಷಣೆಯ ಮೂಲಕ ಆತ್ಮಗೌರವವನ್ನು ಹೆಚ್ಚಿಸಿದವರು ‘ಲಾಲ್ ಬಹದ್ದೂರ್ ಶಾಸ್ತಿçÃ’ರವರು. ಕಾರ್ಮಿಕರಲ್ಲಿ ಗೌರವ ಪ್ರತಿಷ್ಠೆಗಳನ್ನು ಹಾಗೂ ಆತ್ಮ ಗೌರವವನ್ನು ಹೆಚ್ಚಿಸುವುದು ನಮ್ಮ ಆದ್ಯ ಕರ್ತವ್ಯ. ದುಡಿದವರಿಗೆ ಸಂಬಳ ಕೊಡುವವರೇ ಮಾಲೀಕರು. ಆದರೆ ಸಂಬಳ ಕೊಡುವ ಮಟ್ಟಕ್ಕೆ ಅವರನ್ನು ಬೆಳೆಸಿದವರು ಕಾರ್ಮಿಕರು. ಶೋಷಣೆ ಮತ್ತು ಅನ್ಯಾಯವನ್ನು ವಿರೋಧಿಸಿ ನಡೆದ ಪ್ರತಿಭಟನೆಯ ಫಲವಾಗಿ ಕಾರ್ಮಿಕರಿಗೆ ೮ ಗಂಟೆಗಳ ಕಾಲ ಕೆಲಸ ನಿರ್ವಹಿಸುವ ನಿಯಮ ಜಾರಿಗೆ ಬಂದಿತು. ನಂತರ ಈ ಕಾರ್ಮಿಕರ ದಿನವು ಆಚರಣೆಗೆ ಬಂದಿತು. ಕಾರ್ಮಿಕರು ಎಂತಹ ಪರಿಸ್ಥಿತಿಯಲ್ಲೂ ಎದುರಿಸುವ ಆತ್ಮಸ್ಥೆöÊರ್ಯವನ್ನು ಜೀವನದ ಕಠಿಣ ಸವಾಲುಗಳನ್ನು ಎದುರಿಸಲು ನಾವು ಕಾರ್ಮಿಕರಿಂದ ಸ್ಫೂರ್ತಿ ಪಡೆಯಬೇಕು. ಕಷ್ಟಪಟ್ಟು ದುಡಿಯುವುದೇ ಯಶಸ್ಸಿನ ಕೀಲಿ ಕೈ. ಜೀವನದ ಕಠಿಣ ಸವಾಲುಗಳನ್ನು ಎದುರಿಸಲು ಕಠಿಣ ಪರಿಶ್ರಮಪಡುವ ಕಾರ್ಮಿಕರು ಎಲ್ಲರಿಗೂ ಸ್ಫೂರ್ತಿ. ನುರಿತ, ಶಿಸುಬದ್ಧ, ಸಮಯ ಪ್ರಜ್ಞೆಯ ಕೆಲಸಗಾರರು ನಮ್ಮೆಲ್ಲರ ಪಾಲಿಗೆ ನಿಧಿ ಇದ್ದಂತೆ. ೧೮೮೬ ರಲ್ಲಿ ಅಮೇರಿಕಾದಲ್ಲಿ ಕಾರ್ಮಿಕರ ದಿನವನ್ನು ಆಚರಿಸಲಾಯಿತು.

ಭಾರತದಲ್ಲಿ ಆಚರಣೆ ಶುರುವಾಗಿದ್ದು ೧೯೨೩ ರಲ್ಲಿ. ಕಾರ್ಮಿಕರು ಶ್ರಮ, ತ್ಯಾಗ, ಕಷ್ಟಗಳನ್ನು ನುಂಗಿ ದೇಶವನ್ನು ಕಟ್ಟುತ್ತಾರೆ. ಇವರು ಶ್ರಮ ಜೀವಿಗಳು. ಕಾರ್ಮಿಕರಿಲ್ಲದೆ ದೇಶವನ್ನು ಊಹಿಸಲು ಸಾಧ್ಯವಿಲ್ಲ. ಎಲ್ಲಾ ಸ್ಥರದಲ್ಲೂ ಕಾರ್ಮಿಕರು ಕಷ್ಟಪಟ್ಟು ದುಡಿಯುವುದರಿಂದ ಪ್ರತಿಯೊಂದು ದೇಶ, ರಾಜ್ಯಗಳು ಪ್ರಗತಿ ಕಾಣುತ್ತದೆ. ಕಾರ್ಮಿಕರ ಶ್ರಮ, ತ್ಯಾಗದ ಮೇಲೆಯೇ ದೇಶದ ಅಭಿವೃದ್ಧಿಯೂ ಅಡಗಿದೆ.

- ಮುಕ್ಕಾಟಿ ಹರಿಣಿ ಗಿರೀಶ್, ಮರಗೋಡು, ಮೊ. ೮೯೭೧೩೫೧೨೩೫