ನಾಪೋಕ್ಲು, ಏ. ೨೯: ಸಮೀಪದ ನೆಲಜಿ ಗ್ರಾಮದ ಮೇದ ಜನಾಂಗದ ಕುಟುಂಬಗಳ ವತಿಯಿಂದ ಕ್ರಿಕೆಟ್ ಪಂದ್ಯಾಟವನ್ನು ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಅಂತಿಮ ಪಂದ್ಯದಲ್ಲಿ ನೆಲಜಿ ತಂಡವು ಕಕ್ಕಬ್ಬೆ ತಂಡದ ವಿರುದ್ಧ ಗೆಲುವು ಸಾಧಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಕಕ್ಕಬ್ಬೆ ತಂಡವು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ಅAತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೆಲಜಿ ತಂಡವು ನಾಲ್ಕು ಓವರ್‌ಗಳಲ್ಲಿ ೫೨ ರನ್ ಗಳಿಸಿತು. ಕಕ್ಕಬ್ಬೆ ತಂಡವು ನಾಲ್ಕು ಓವರ್‌ಗಳಲ್ಲಿ ಕೇವಲ ೨೪ ರನ್‌ಗಳಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು.

ವಿಜೇತರಿಗೆ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮನುಮುತ್ತಪ್ಪ ಟ್ರೋಫಿ ವಿತರಿಸಿದರು. ಟ್ರೋಫಿ ದಾನಿ ಜಾನಕಿ ತೀರ್ಪುಗಾರರಾದ ಜಯಂತ್, ಪ್ರಮೋದ್, ಸಂಘಟಕರಾದ ಚೇತನ್, ಸುನಿಲ್ ಪಾಲ್ಗೊಂಡಿದ್ದರು. ಬೆಟ್ಟಗೇರಿ, ನೆಲಜಿ, ಕಕ್ಕಬ್ಬೆ ಸೇರಿದಂತೆ ಆರು ಗ್ರಾಮಗಳ ತಂಡಗಳು ಪಾಲ್ಗೊಂಡಿದ್ದವು.