ವೀರಾಜಪೇಟೆ, ಏ. ೨೯: ಪತಿ ಮತ್ತು ಪತ್ನಿಯ ನಡುವೆ ಮನಸ್ತಾಪದಿಂದ ಕೋಪಗೊಂಡ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಕಾಕೋಟುಪರಂಬು ನಾಲ್ಕೇರಿ ಗ್ರಾಮದಲ್ಲಿ ಸಂಭವಿಸಿದೆ.

ಕಾಕೋಟುಪರAಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕೇರಿ ಗ್ರಾಮದ ಎಂ. ಎನ್. ಉಮೇಶ್ ಎಂಬುವವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಚೋಮಚ್ಚೀರ ಲವ ಅವರ ಪತ್ನಿ ಜೇನು ಕುರುಬರ ಸುಮಿತ್ರ (೨೫) ಪತಿಯಿಂದ ಕೊಲೆಯಾದ ಗೃಹಿಣಿ.

ಲವ ಎಂಬಾತ ಕಾಕೋಟುಪರಂಬು ನಾಲ್ಕೇರಿ ಗ್ರಾಮದ ನಿವಾಸಿಯಾಗಿರುವ ಎಂ.ಎನ್, ಉಮೇಶ್ ಅವರ ತೋಟದ ಲೈನ್ ಮನೆಯಲ್ಲಿ ಸುಮಾರು ೧೫ ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದ. ನಾಲ್ಕೇರಿ ಗ್ರಾಮದ ಸುಮಿತ್ರ ಎಂಬವಳನ್ನು ಮದುವೆಯಾಗಿ ನಾಲ್ಕು ವರ್ಷಗಳು ಸಂದಿದೆ. ಎರಡೂವರೆ ವರ್ಷದ ಗಂಡು ಮಗ ಹಾಗೂ ೬ ತಿಂಗಳ ಪುಟ್ಟ ಹೆಣ್ಣು ಮಗುವಿದೆ. ಈ ಮಧ್ಯೆ ಪತಿ ಮತ್ತು ಪತ್ನಿಯರ ನಡುವೆ ಕಲಹಗಳು ನಡೆಯುತಿತ್ತು. ಕಲಹವಾದ ಕ್ಷಣವೇ ಸುಮಿತ್ರ ಮಕ್ಕಳನ್ನು ಬಿಟ್ಟು ಇತರೆಡೆಗೆ ತೆರಳುತ್ತಿದ್ದಳು. ತಾ.೨೮ರಂದು ಸಂಜೆ ಎಂದಿನAತೆ ಕೆಲಸ ಮುಗಿಸಿ ನಗರಕ್ಕೆ ಬಂದು ದಿನಸಿ ವಸ್ತುಗಳನ್ನು ಖರೀದಿಸಿ ಪತ್ನಿ ಮತ್ತು ಮಕ್ಕಳೊಂದಿಗೆ ಮನೆಗೆ ಲವ ಹಿಂದಿರುಗಿದ್ದಾನೆ. ನಡುರಾತ್ರಿ ೧ ಗಂಟೆಯ ಸಮಯದಲ್ಲಿ ನಿದ್ದೆಯಿಂದೆದ್ದ ಲವ ಕಬ್ಬಿಣದ ಸಲಾಖೆಯಿಂದ ಸುಮಿತ್ರಾಳ

(ಮೊದಲ ಪುಟದಿಂದ) ತಲೆಭಾಗಕ್ಕೆ, ಕೈ, ಕಾಲು ಭಾಗಗಳಿಗೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಸುಮಿತ್ರ ಸಾವನ್ನಪ್ಪಿದ್ದಾಳೆ. ಇಂದು ಬೆಳಿಗ್ಗೆ ಎಂದಿನAತೆ ತೋಟದ ಮಾಲೀಕರು ಲೈನ್ ಭಾಗಕ್ಕೆ ಆಗಮಿಸಿ ಕಾರ್ಮಿಕರನ್ನು ಕರೆದಿದ್ದಾರೆ. ಯಾವುದೇ ಪ್ರತಿಕ್ರಿಯೆ ಎದುರಾಗಲಿಲ್ಲ. ಸನಿಹದ ಕಾರ್ಮಿಕರನ್ನು ಕರೆದು ಮನೆಯ ಒಳಭಾಗದಲ್ಲಿ ನೋಡಲಾಗಿ ಸುಮಿತ್ರಳ ರಕ್ತಸಿಕ್ತ ಮೃತದೇಹ ಪತ್ತೆಯಾಗಿದೆ. ಮನೆಯ ಕೋಣೆಯೊಂದರಲ್ಲಿ ಲವ ನಿದ್ರೆಗೆ ಜಾರಿದ್ದ. ನಂತರದಲ್ಲಿ ಘಟನೆಯ ಬಗ್ಗೆ ಕೇಳಿದಾಗ ವಿವರ ನೀಡಿದ್ದಾನೆ. ತೋಟದ ಮಾಲೀಕ ಉಮೇಶ್ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿ ಸಿ.ಪಿ. ಲವನ ಮೇಲೆ ಕೊಲೆ ಪ್ರಕರಣ ದಾಖಲಾಗಿದ್ದು. ಬಂಧಿತ ಅರೋಪಿ ಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿಡುವAತೆ ಆದೇಶ ವಾಗಿದೆ. ಮಕ್ಕಳನ್ನು ಜಿಲ್ಲಾ ಸಾಂತ್ವನ ಕೇಂದ್ರಕ್ಕೆ ಆರೈಕೆಗಾಗಿ ಕಳುಹಿಸಲಾಗಿದೆ.

ಘಟನೆಯ ಮಾಹಿತಿ ದೊರೆ ಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ವೀರಾಜಪೇಟೆ ಪ್ರಬಾರ ಉಪವಿಭಾಗ ಅಧೀಕ್ಷಕ ಗಜೇಂದ್ರ ಪ್ರಸಾದ್, ವೀರಾಜಪೇಟೆ ವೃತ್ತ ನಿರೀಕ್ಷಕ ಶಿವ ರುದ್ರಪ್ಪ, ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಸಿದ್ದಲಿಂಗ ಬಿ. ಬಾಣಸೆ ಮತ್ತು ಅಪರಾಧ ವಿಭಾಗದ ಪಿ.ಎಸ್.ಐ. ಸಿ.ಬಿ. ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

-ಕಿಶೋರ್ ಕುಮಾರ್ ಶೆಟ್ಟಿ