ಪೊನ್ನAಪೇಟೆ, ಏ.೨೯: ಪೊನ್ನಂಪೇಟೆ ಗೋಣಿಕೊಪ್ಪ ರಸ್ತೆಯ ನಡುವೆ ಜೋಡುಬೀಟಿ ಬಳಿ ಸೆಲರಿಯೋ ಕಾರು (ಕೆ.ಎ.೧೨, ಎಂ.ಬಿ.೧೭೮೭) ಹಾಗೂ ಬೈಕ್ (ಕೆ.ಎ.೧೨, ಹೆಚ್.೯೭೪೮) ನಡುವೆ ಅಪಘಾತ ಸಂಭವಿಸಿದ್ದು ಬೈಕ್‌ನ ಹಿಂಬದಿ ಸವಾರನ ಸ್ಥಿತಿ ಚಿಂತಾಜನಕವಾಗಿದೆ.
ಸಂಜೆ ೭ ಗಂಟೆಯ ಸಮಯದಲ್ಲಿ ಪೊನ್ನಂಪೇಟೆ, ಏ.೨೯: ಪೊನ್ನಂಪೇಟೆ ಗೋಣಿಕೊಪ್ಪ ರಸ್ತೆಯ ನಡುವೆ ಜೋಡುಬೀಟಿ ಬಳಿ ಸೆಲರಿಯೋ ಕಾರು (ಕೆ.ಎ.೧೨, ಎಂ.ಬಿ.೧೭೮೭) ಹಾಗೂ ಬೈಕ್ (ಕೆ.ಎ.೧೨, ಹೆಚ್.೯೭೪೮) ನಡುವೆ ಅಪಘಾತ ಸಂಭವಿಸಿದ್ದು ಬೈಕ್‌ನ ಹಿಂಬದಿ ಸವಾರನ ಸ್ಥಿತಿ ಚಿಂತಾಜನಕವಾಗಿದೆ.

ಸಂಜೆ ೭ ಗಂಟೆಯ ಸಮಯದಲ್ಲಿ (ಮೊದಲ ಪುಟದಿಂದ) ಹಿಂಬದಿ ಸವಾರ ಸದಾಶಿವ ಎಂಬವರಿಗೆ ಮಾರಣಾಂತಿಕ ಪೆಟ್ಟಾಗಿದೆ. ತೊಡೆ ಭಾಗ ಮುರಿದಿರುವ ಕಾರಣ ಅವರ ಸ್ಥಿತಿ ಚಿಂತಾಜನಕವಾಗಿದೆ. ಇನ್ನಿಬ್ಬರಿಗೂ ಕಾಲು ಮುರಿದು ಗಂಭೀರ ಸ್ಥಿತಿಯಲ್ಲಿದ್ದಾರೆ. ಕಾರು ಸವಾರನಿಗೂ ಸ್ವಲ್ಪ ಪ್ರಮಾಣದ ಪೆಟ್ಟಾಗಿದೆ.
ಕಾರು ಚಾಲಕ ಪ್ರಣವ್ ಮದ್ಯಪಾನ ಮಾಡಿ ಗಾಡಿ ಓಡಿಸಿರಬಹುದು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸಬೇಕಾಗಿದೆ. ಗಾಯಾಳುಗಳಿಗೆ ಗೋಣಿಕೊಪ್ಪಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣಾಧಿಕಾರಿ. ಡಿ. ಕುಮಾರ್ ತನಿಖೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಂ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು. - ಚೆನ್ನನಾಯಕ್, ಜಗದೀಶ್