ವೀರಾಜಪೇಟೆ, ಏ. ೨೯: ವೀರಾಜಪೇಟೆ - ಮಾಕುಟ್ಟ ಚೆಕ್‌ಪೋಸ್ಟ್ನಲ್ಲಿ ಕಳೆದ ತಾ. ೪ರಂದು ಅಕ್ರಮವಾಗಿ ಮಾರಾಟ ಮಾಡಲು ಸಾಗಿಸುತ್ತಿದ್ದ ಅಕ್ಕಿಯನ್ನು ಪತ್ತೆಹಚ್ಚಿ ಅಗತ್ಯ ವಸ್ತುಗಳ ಕಾಯ್ದೆ ೧೯೫೫ರಂತೆ ಪ್ರಕರಣ ದಾಖಲಿಸಲಾಗಿದ್ದು, ವಶಪಡಿಸಿಕೊಂಡಿರುವ ಒಟ್ಟು ೧೬೫ ಕ್ವಿಂಟಾಲ್ ಅಕ್ಕಿಯನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಮೇ ೨೧ರಂದು ವೀರಾಜಪೇಟೆಯ ಎ.ಪಿ.ಸಿ.ಎಂ.ಎಸ್. ಸಗಟು ಮಳಿಗೆಯಲ್ಲಿ ಮಾರಾಟ ಮಾಡಲಾಗುವುದು. ಅಕ್ಕಿಯನ್ನು ಖರೀದಿಸಲು ಆಸಕ್ತ ಉಳ್ಳವರು ಪೂರ್ವಾಹ್ನ ೧೧ ಗಂಟೆಗೆ ಹಾಜರಾಗುವಂತೆ ತಹಶೀಲ್ದಾರ್ ಡಾ. ಆರ್. ಯೋಗಾನಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.