*ಗೋಣಿಕೊಪ್ಪ, ಏ. ೨೯: ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನಕೊಲ್ಲಿ ಮತ್ತು ನಾಯಿಕಲ್ಲು ಕಾಲೋನಿಯ ಕಾಂಕ್ರಿಟ್ ರಸ್ತೆಯನ್ನು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಅವರು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು.
ಶ್ರೀಮಂಗಲ ದಾಸನಕೊಲ್ಲಿ ರಸ್ತೆ ಮಾರ್ಗದಲ್ಲಿ ಶಾಸಕರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜ್ಜಮಾಡ ಜಯ ಹಾಗೂ ಇತರ ಅತಿಥಿ ಗಳೊಂದಿಗೆ ೧.೮೦ ಮೀಟರ್ ೧೦ ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು ಶ್ರೀಮಂಗಲ ವ್ಯಾಪ್ತಿಯಲ್ಲಿ ೧ ಕೋಟಿ ೩೫ ಲಕ್ಷದಲ್ಲಿ ಸುಮಾರು ೪೨ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಂತಹAತವಾಗಿ ನಡೆಯಲಿವೆ ಎಂದು ಮಾಹಿತಿ ನೀಡಿದರು. ಜೂನಿಯರ್ ಕಾಲೇಜು ರಸ್ತೆ ಡಾಂಬರೀಕರಣ ೩ ಲಕ್ಷ ಅನುದಾನದಲ್ಲಿ ನಡೆಸಲಾಗಿದೆ ಎಂದು ಈ ಸಂದರ್ಭ ತಿಳಿಸಿದರು.
ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ
(ಮೊದಲ ಪುಟದಿಂದ) ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಸದಸ್ಯ ತೀತಮಾಡ ಲಾಲಭೀಮಯ್ಯ, ಶಕ್ತಿ ಕೇಂದ್ರದ ಪ್ರಮುಖ್ ಉಮೇಶ್, ಪ್ರಮುಖರಾದ ಲವ ಕುಶಾಲಪ್ಪ, ಕಾಲೇಜು ನಿರ್ದೇಶಕ ಮಂದಣಮಾಡ ಗಣೇಶ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಗಡ ಮಧುದೇವಯ್ಯ, ಲೋಕೋಪಯೋಗಿ ಇಂಜಿನಿಯರ್ ಸಣ್ಣುವಂಡ ನವೀನ್, ಗುತ್ತಿಗೆದಾರರು, ಗ್ರಾಮಸ್ಥರು ಹಾಜರಿದ್ದರು.
-ಎನ್.ಎನ್. ದಿನೇಶ್