ಮಡಿಕೇರಿ, ಏ. ೨೯: ಮಡಿಕೇರಿ ನಗರದ ರಾಜಾಸೀಟು ಮೂಲಕ ಫಿ.ಮಾ. ಕಾರ್ಯಪ್ಪ ಕಾಲೇಜು ಕಡೆ ತೆರಳುವ ರಸ್ತೆಯಲ್ಲಿ ವಾಹನದಟ್ಟಣೆ ಹಾಗೂ ಅತಿವೇಗದ ಚಾಲನೆಯನ್ನು ನಿಯಂತ್ರಿಸಲು ನಗರ ಸಂಚಾರಿ ಪೊಲೀಸರು ರಸ್ತೆ ಉಬ್ಬು ಅಳವಡಿಸಿದ್ದಾರೆ.
ರಸ್ತೆ ಉಬ್ಬುಗಳಿಗೆ ಇಂದು ಇದರ ಅರಿವಾಗುವಂತೆ ಮಾಡಲು ಬಿಳಿ ಬಣ್ಣವನ್ನು ಬಳಿಯಲಾಗಿದೆ. ಇದರೊಂದಿಗೆ ರಾತ್ರಿ ವೇಳೆ ಸಹಕಾರಿಯಾಗಲು ‘ರಿಫ್ಲೆಕ್ಟ್ರ‍್ಸ್’ ಅಳವಡಿಸಲಾಗಿದೆ. ಸಂಚಾರಿ ಠಾಣಾಧಿಕಾರಿ ಅಂತಿಮ, ಪಿಎಸ್‌ಐ ಐ.ಪಿ. ನಂದ ಮತ್ತಿತರರು ಉಸ್ತುವಾರಿ ನಡೆಸಿದರು.